ಎಂ. ತುಂಗಪ್ಪ ಬಂಗೇರರಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪುಂಜಾಲಕಟ್ಟೆ: ಸಂಗಬೆಟ್ಟು ಕ್ಷೇತ್ರದ ಜಿ.ಪಂ ಸದಸ್ಯ ತುಂಗಪ್ಪ ಬಂಗೇರರವರು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾ.7ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018-19ಹಾಗೂ20ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಎಂ. ತುಂಗಪ್ಪ ಬಂಗೇರರವರು ಹವ್ಯಾಸಿ ಕಲಾವಿದರಾಗಿ, ಸಂಘಟಕರಾಗಿ, ಪೋಷಕರಾಗಿ ರಂಗ ಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸುಧೀರ್ಘ 45 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾಟಕ-ರಂಗಭೂಮಿಯ ಚಟುವಟಿಕೆಯಲ್ಲಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ್ನು ಸಂಸ್ಥಾಪಿಸಿ, ಸಂಸ್ಥೆಯನ್ನು ನಾಟಕ ಕ್ಷೇತ್ರ ವಿಶೇಷವಾಗಿ ತೊಡಗಿಸಿಕೊಂಡು, ನಾಟಕ ರಚನೆಕಾರರಾಗಿ, ಅಭಿನಯದೊಂದಿಗೆ ನಿರ್ದೇಶನ, ಸಾಹಿತ್ಯ, ಗಾಯನದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯನ್ನು ನಿರಂತರವಾಗಿ ನಡೆಸಿಕೊಂಡು ಕಲಾವಿದರ ತಂಡವನ್ನು ರಚಿಸಿ ಗ್ರಾಮ, ಜಿಲ್ಲೆ, ರಾಜ್ಯ ಮಟ್ಟದಲ್ಲಿ ನಾಟಕ ಪ್ರದರ್ಶಿಸಿದ್ದಾರೆ. ತುಳು ನಾಟಕದ ಮೂಲಕ ತುಳು-ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮೂಲಕ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸುವ ಪ್ರಯತ್ನ ಪ್ರಶಂಸನೀಯ. ರಂಗಭೂಮಿಯ ಬಡ ಕಲಾವಿದರಿಗೆ ಆಸರೆಯಾಗಿ, ಅಶಕ್ತ ಕಲಾವಿದರ ನೆರಳಾಗಿ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ವಸ್ತಿಕ್ ಫ್ರೆಂಡ್ಸ್‌ನ ಮೂಲಕ ನಡೆಯುವ ಸಾಮೂಹಿಕ ವಿವಾಹದ ಯೋಜನೆಯಲ್ಲಿ ವಿಶೇಷವಾಗಿ ರಂಗ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ಇವರು ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಲೋಕಯ್ಯ ಪೂಜಾರಿ ಮತ್ತು ದೇವಕಿ ದಂಪತಿ ಪುತ್ರ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.