ಮಾ.7: ನಾರಾವಿ ಬಿರ್ವ ಚಾರಿಟೀಬಲ್ ಟ್ರಸ್ಟ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಾರಾವಿ ಬಿರ್ವ ಚಾರಿಟೀಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ಮಾ.7ರಂದು ನಡೆಯಲಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್ ನಾರಾವಿ ತಿಳಿಸಿದ್ದಾರೆ.

ಈ ಕುರಿತು ಮಾ.3ರಂದು ಪತ್ರಿಕಾ ಭವನದಲ್ಲಿ  ಮಾಧ್ಯಮ ಗೋಷ್ಠಿ ನಡೆಸಿದ ಅವರು, ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂಬ ದೃಷ್ಟಿಯಿಂದ ಈ ಟ್ರಸ್ಟ್ ಅನ್ನು ಪ್ರಾರಂಭಿಸುತ್ತಿದ್ದು, ಇದು ಟ್ರಸ್ಟ್ ನ ಅಧ್ಯಕ್ಷೆ ಹಾಗೂ ಮಾತೃಶ್ರೀ ವೀರಮ್ಮ ಸಂಜೀವ ಸಾಲಿಯಾನ್ ಕನಸಿನ ಕೂಸಾಗಿದೆ.

ಈ ಉದ್ದೇಶವನ್ನು ಸಾಕಾರಗೊಳಿಸುವತ್ತ ಕಾರ್ಯಪ್ರವೃತ್ತವಾಗಿರುವ ಟ್ರಸ್ಟ್ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ  ವಿದ್ಯಾಭ್ಯಾಸ ಮಾಡುತ್ತಿರುವ 44 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದು,  ಅವರ ಇಚ್ಛಾನುಸಾರಕ್ಕೆ ಅನೂಕೂಲವಾಗುವಂತೆ ಹಾಗೂ ಹೆತ್ತವರ ಒಪ್ಪಿಗೆ ಮೇರೆಗೆ ಟ್ರಸ್ಟ್ ನ ವತಿಯಿಂದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ನಾರಾವಿ ಸನ್ನಿಧಿ ಪ್ಯಾಲೇಸ್ ನಲ್ಲಿ ಟ್ರಸ್ಟ್ ನ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಟ್ರಸ್ಟ್ ನ ಉದ್ಘಾಟನೆ ನೆರವೇರಿಸಲಿದ್ದಾರೆ.  ಬಲ್ಯೊಟ್ಟು ಕ್ಷೇತ್ರದ ವಿಖ್ಯಾತಾನಂದ ಸ್ವಾಮೀಜಿ ಆರ್ಶೀವಚನ ನೀಡಲಿದ್ದು, ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದಾರೆ.

ಇದೇ ವೇಳೆ ಮಾಜಿ ಶಾಸಕ ಹಾಗೂ ಶ್ರೀಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತ ಬಂಗೇರ ಟ್ರಸ್ಟ್ ನ ವಿದ್ಯಾರ್ಥಿಗಳು ಸೇರಿದಂತೆ ಸಾಧಕರನ್ನು ಸನ್ಮಾನಿಸಲ್ಲಿದ್ದು, ಪುಸ್ತಕ ವಿತರಣೆ ಕಾರ್ಯಕ್ರಮ ಕೂಡ ನಡೆಯಲಿದೆ.  ಟ್ರಸ್ಟ್ ನ ಅಧ್ಯಕ್ಷೆ ವೀರಮ್ಮ ಸಂಜೀವ ಸಾಲಿಯಾನ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಪನ್ಯಾಸಕ ಡಾ. ಯೋಗಿಶ್ ಕೈರೋಡಿ ದಿಕ್ಸೂಚಿ ಭಾಷಣ ಭಾಷಣ ಮಾಡಲಿದ್ದಾರೆ.

ಇನ್ನೂ ಸಭಾ ಕಾರ್ಯಕ್ರಮದಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ಪ್ರವೀಣ್ ಕೋಟ್ಯಾನ್ ನಾರಾವಿ, ಕಾನೂನು ಸಲಹೆಗಾರ ಮನೋಹರ್ ಇಳಂತಿಲ, ಸತೀಶ್ ಪಿ.ಎನ್ . ವೇಣೂರು, ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ಸಂತೋಷ್ ಉಪ್ಪಾರು, ರಕ್ಷಿತ್ ಬಂಗೇರ ಅಂಡಿಂಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.