ಮಡಂತ್ಯಾರು: ಮಡಂತ್ಯಾರು ಗ್ರಾಮ ಪಂಚಾಯತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2020-21 ನೇ ಸಾಲಿನ ದ್ವಿತೀಯ ಹಂತದ ಹಾಗೂ 14ನೇ ಹಣಕಾಸು ಯೋಜನೆಯ 2018-19 ಹಾಗೂ 2019-20ನೇ ಸಾಲಿನ ಸಾಮಾಜಿಕ ಪರಿಶೋಧನೆ ಕುರಿತು ವಿಶೇಷ ಗ್ರಾಮ ಸಭೆ ಮಾ.2ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನೋಡಲ್ ಅಧಿಕಾರಿಯಾಗಿ ಸಭೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಾಲೂಕು ಸಂಯೋಜಕಿ ಅಂಜಲಿ ಶೇಟ್, ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್ ರೇಷ್ಮಾ, ಪೂರ್ಣಿಮಾ, ರಂಜನ್, ಗ್ರಾ.ಪಂ ಅಧ್ಯಕ್ಷೆ ಶಶಿಪ್ರಭಾ, ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ, ಕಾರ್ಯದರ್ಶಿ ಮೋರ್ಲಿನ್ ಕ್ರಿಸ್ತಿನ್ ಡಿಸೋಜಾ, ಗ್ರಾ.ಪಂ ಸದಸ್ಯರುಗಳು, ಸಿಬ್ಬಂದಿವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.