ಬೆಳ್ತಂಗಡಿ: ತಾಲೂಕು ಪದವೀಧರ (6-8) ಪ್ರಾಥಮಿಕ ಶಿಕ್ಷಕರ ಸಂಘದ 2021-26 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಫೆ.5 ರಂದು ನಡೆದಿದ್ದು, ಮಾಯಾ ಸ. ಉ. ಪ್ರಾ.ಶಾಲೆಯ ಜಿಪಿಟಿ ಶಿಕ್ಷಕ ಯೋಗೇಶ ಹೆಚ್ ಆರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಸ.ಉ.ಪ್ರಾ.ಶಾಲೆ ಪೆರೋಡಿತ್ತಾಯಕಟ್ಟೆಯ ಶಿಕ್ಷಕಿ ಶುಭ ಕೆ, ಪ್ರಧಾನ ಕಾರ್ಯದರ್ಶಿಯಾಗಿ ಸ. ಉ. ಪ್ರಾ.ಶಾಲೆ ಉಂಬೆಟ್ಟು ಶಿಕ್ಷಕ ರವಿಕುಮಾರ್ ಬಿ. ಆರ್, ಖಜಾಂಚಿಯಾಗಿ ಸ. ಉ. ಪ್ರಾ.ಶಾಲೆ ಸರಳಿಕಟ್ಟೆಯ ಶಿಕ್ಷಕ ಅಭಿಷೇಕ್ ಆರ್. ಎನ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಸ. ಉ. ಪ್ರಾ.ಶಾಲೆ ಮಚ್ಚಿನ ಶಿಕ್ಷಕ ರಮೇಶ ಬಂಕೊಳ್ಳಿ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಘದ ತಾಲೂಕು ಚುನಾವಣಾಧಿಕಾರಿಗಳು ಮತ್ತು ಬೆಳ್ತಂಗಡಿ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ರವರು ಅಂತಿಮ ಪದಾಧಿಕಾರಿಗಳ ಪಟ್ಟಿಯನ್ನು ಘೋಷಿಸಿದರು.
ಕೇಂದ್ರ ಸಂಘದ ಬೈಲಾ ನಿಯಮಗಳನ್ವಯ ಆಯ್ಕೆಯಾದ ತಾಲ್ಲೂಕು ಸಂಘದ ನೂತನ ಪದಾಧಿಕಾರಿಗಳು ಮಾ.1ರಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಸಂಘದ ಕ್ರೀಡಾ ಕಾರ್ಯದರ್ಶಿಯಾಗಿ ತಣ್ಣೀರುಪಂತ ಶಾಲಾ ಶಿಕ್ಷಕ ರವಿಕುಮಾರ್ ಜೆ.,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾರಾವಿ ಶಾಲಾ ಶಿಕ್ಷಕಿ ಶಾರದಾ , ವಕ್ತಾರರಾಗಿ ಬರಂಗಾಯ ಶಾಲೆಯ ಶಿಕ್ಷಕ ಸತೀಶ್ ಆಚಾರ್ , ನಿರ್ದೇಶಕರಾಗಿ ಕರ್ನೋಡಿ ಲಾಯಿಲ ಶಾಲಾ ಶಿಕ್ಷಕಿ ಉಷಾ ಹಾಗೂ ಕೊಯ್ಯೂರು ದೇವಸ್ಥಾನ ಶಾಲೆಯ ಮಧು ಕೆ. ಎಸ್ ರವರನ್ನೂ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಮಾಡಿದ್ದಾರೆ.