ಕಣಿಯೂರು 6 ನೇ ವರ್ಷದ ಮಹಮ್ಮಾಯಿ ಪ್ರತಿಷ್ಠಾ ಮಹೋತ್ಸವ,ಗೋಂದಲ ಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಣಿಯೂರು : ಇಲ್ಲಿಯ ಶಿವಾಜಿ ನಗರದ ಶ್ರೀ ಮಹಮ್ಮಾಯಿ ಮರಾಟಿ ಸಂಘದ ವತಿಯಿಂದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಹಾಗೂ ಗೋಂದಲ ಪೂಜೆ ಫೆ.27 ಮತ್ತು ಫೆ.28 ರಂದು ಜರುಗಿತು.

ಫೆ.27 ರಂದು ಮಧ್ಯಾಹ್ನ ದೇವಿ ಸನ್ನಿಧಿಯಲ್ಲಿ ಗಣಪತಿ ಗಣಹೋಮ,ಶ್ರೀ ದೇವಿಗೆ ಕಲಶಾಭಿಷೇಕ,ಮಹಾ ಪೂಜೆ,ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ವೇ.ಮೂ.ಕೆ.ಎಮ್. ಸುಬ್ರಮಣ್ಯ ಮುಚ್ಚಿನಾಯ ರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. ಫೆ.28 ರಂದು ರಾತ್ರಿ ಉಜಿರೆ ಮಾಚಾರು ಶ್ರೀ ಲಕ್ಷ್ಮಿ ಜನಾರ್ದನ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಶ್ರೀ ಮಹಮ್ಮಾಯಿ ಮರಾಟಿ ಸೇವಾ ಸಂಘ,ಊರಿನ-ಪರ ಊರಿನ ಭಕ್ತಾದಿಗಳ ಸಹಾಯದಿಂದ ಶ್ರೀದೇವಿ ಸನ್ನಿಧಿಯಲ್ಲಿ ಗುಮ್ಮಟೆ ನೃತ್ಯ, ಗೋಂದಲ ಪೂಜೆ,ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.ಶ್ರೀ ಮಹಮ್ಮಾಯಿ ಮರಾಠಿ ಸೇವಾ ಸಂಘದ ಪದಾಧಿಕಾರಿಗಳ ಮನವಿಯಂತೇ ಹೈಮಾಸ್ಕ್ ವಿದ್ಯುತ್ ಹೈಮಾಸ್ಕ್ ದೀಪವನ್ನು ನೀಡುವ ಮೂಲಕ ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೇವಿಯ ಸನ್ನಿಧಿಯಲ್ಲಿ ಹೈಮಾಸ್ಕ್ ದೀಪ ಬೆಳಗಿಸಿದರು.ಮಂಗಳೂರು ಆದಾಯ ತೆರಿಗೆ ಜಂಟಿ ಆಯುಕ್ತ ಚಂದ್ರ ಕುಮಾರ್, ಕಣಿಯೂರು ಪಂಚಾಯತ ಉಪಾಧ್ಯಕ್ಷ ಸುನಿಲ್ ಕೋಟ್ಯಾನ್,ಸ್ಥಳೀಯ ಪಂಚಾಯತ ಸದಸ್ಯರು, ಕಣಿಯೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣಿಕ್ಕರ,ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಸದಸ್ಯರಾದ ದಿನೇಶ್ ಗೌಡ ಕಲಾಯಿತೋಟ್ಟು, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದ ಉಮೇಶ್, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ನಾಳ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ ಉಪಸ್ಥಿತರಿದ್ದರು.ಅಡಳಿತ ಸಮಿತಿ ಗೌರವಾಧ್ಯಕ್ಷ ಪುತ್ತುನಾಯ್ಕ ಕುಡುವಂತಿ, ಅಧ್ಯಕ್ಷ ಬಾಬು ನಾಯ್ಕ ಮೈಪಾಜೆ,ಉಪಾಧ್ಯಕ್ಷ ತಿಲಕ್ ಕುಡುವಂತಿ,ಕಾರ್ಯದರ್ಶಿ ರುಕ್ಮಯ ನಾಯ್ಕ ವಳಬಾವು, ಜೊತೆ ಕಾರ್ಯದರ್ಶಿ ಸೀತಾರಾಮ ನಾಯ್ಕ ಅಂತರ, ಉಮೇಶ ನಾಯ್ಕ ಕುಕ್ಕದಡಿ,ಲೆಕ್ಕ ಪರಿಶೋಧಕ ಉಮೇಶ್ ನಾಯ್ಕ ಕೇಲ್ದಡ್ಕ,ಕೋಶಾಧಿಕಾರಿ ಸಂಜೀವ ನಾಯ್ಕ ಕೊರಂಟಾಜೆ, ಪೂಜಾ ಸಮಿತಿ ಕೃಷ್ಣ ನಾಯ್ಕ ಒಳಬಾವು,ಕುಶಾಲಪ್ಪ ನಾಯ್ಕ ಕುಕ್ಕುದಡಿ, ಮೋಹನ್ ನಾಯ್ಕ ಕೋರ್ಯರು, ಹೇಮಂತ್ ನಾಯ್ಕ ಪೇರಳ್ ಗುಡ್ಡೆ,ದೇವಪ್ಪ ನಾಯ್ಕ ಪೇರಲ್ ಗುಡ್ಡೆ,ನಿವೃತ್ತ ಸೈನಿಕ ಜತ್ತಪ್ಪ ನಾಯ್ಕ ಬೊಳ್ಳವು,ಹಾಗೂ ಸಂಘದ ಪದಾಧಿಕಾರಿಗಳು, ವಿವಿಧ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಷ್ಠಾ ವರ್ಧಂತಿ ಮಹೋತ್ಸವವನ್ನು ಕಣ್ತುಂಬಿ ಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.