ಬೆಳ್ತಂಗಡಿ: ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ವತಿಯಿಂದ ಬಿಲ್ಲವ ಸಮಾಜದ ವಿವಿಧ ಮಾದ್ಯಮಗಳ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಫೆ. 28ರಂದುನಡೆಯಿತು.
ಮಹಾಮಂಡಲದ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಸುದ್ದಿ ಬಿಡುಗಡೆಯ ಜಾರಪ್ಪ ಪೂಜಾರಿ ಬೆಳಾಲು, ಸಂತೋಷ್ ಕೋಟ್ಯಾನ್ ಬಳಂಜ, ವಿಜಯವಾಣಿಯ ಮನೋಹರ್ ಬಳಂಜ , ಪ್ರಜಾವಾಣಿಯ ಗಣೇಶ್ ಶಿರ್ಲಾಲು, ಪತ್ರಕರ್ತರಾದ ಪ್ರಶಾಂತ್ ಪಾದೆ, ಸುದೀಪ್ ಸವಣಾಲು ಇವರನ್ನು ಸನ್ಮಾನಿಲಾಯಿತು.
ಈ ಸಂದರ್ಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರಾಷ್ಟೀಯ ಬಿಲ್ಲವರ ಮಹಾಮಂಡಲದ ಪದಾಧಿಕಾರಿಯಾದ ಚಂದ್ರಶೇಖರ್ ಸುವರ್ಣ, ಗಣೇಶ್ ಪೂಜಾರಿ, ಯೋಗೀಶ್ ಕೋಟ್ಯಾನ್, ಗಂಗಾಧರ ಪೂಜಾರಿ, ಜೆ. ಕುಲಾಲ್ ಕುಬೆವೂರು, ಶಿವಾಜಿ ಸುವರ್ಣ ಉಪಸ್ಥಿತರಿದ್ದರು.