ಗುರುವಾಯನಕೆರೆ ಎಕ್ಸೆಲ್ ಕಾಲೇಜು ವಿದ್ಯಾರ್ಥಿ ಅಮೋಘ ರಿಗೆ ವಿಜ್ಞಾನ ಮತ್ತು ಸಂಶೋಧನ ಕ್ಷೇತ್ರದ ಸಾಧಕ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಅಮೋಘ ನಾರಾಯಣ ರವರಿಗೆ ವಿಜ್ಞಾನ ಮತ್ತು ಸಂಶೋಧನ ಕ್ಷೇತ್ರದ ಸಾಧಕ ಪ್ರಶಸ್ತಿ ಲಭಿಸಿದೆ.

ಕೃಷಿ ಕ್ಷೇತ್ರದಲ್ಲಿ ಕಳೆಗಿಡಗಳನ್ನು ರಾಸಾಯನಿಕ ಬಳಸದೆ ಹೇಗೆ ನಾಶಪಡಿಸಬಹುದು ಎಂಬ ಕುರಿತು ಹಾಗೂ ತರಕಾರಿ ಹಣ್ಣು ಹಂಪಲು ದೀರ್ಘಕಾಲ ಕೆಡದಂತೆ  ಸಂರಕ್ಷಣೆ ಮಾಡುವ ವಿನೂತನ ತಂತ್ರಜ್ಞಾನ ಅನ್ವೇಷಣೆಗೆ ಈ ಪ್ರಶಸ್ತಿ ಲಭಿಸಿದ್ದು, ಈ ಹಿಂದೆ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿಯೂ ಇವರು ವಿಜೇತರಾಗಿದ್ದರು.

ಮೂಲತಃ ಪುತ್ತೂರು ನಿವಾಸಿಯಾಗಿರುವ ಡಾ| ರಾಜಾರಾಮ್ ಮತ್ತು ಡಾ| ಸುಧಾ ರಾಜಾರಾಮ್ ದಂಪತಿ ಪುತ್ರರಾದ ಅಮೋಘ ನಾರಾಯಣ ರವರು ಪ್ರಸ್ತುತ ಗುರುವಾಯನಕೆರೆಯಲ್ಲಿ ವಾಸ್ತವ್ಯವಿದ್ದು, ಎಕ್ಸೆಲ್ ಸೈನ್ಸ್ ಪಿಯು ಕಾಲೇಜಿನಲ್ಲಿ  ಪ್ರಥಮ ಪಿಯುಸಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.