ಪ್ರಕೃತಿ ಸಂರಕ್ಷಣೆಯ ಸಂಕಲ್ಪ ಮಾಡಿದ ನೆರಿಯ ಗ್ರಾಮ ಇತರರಿಗೆ ಮಾದರಿ: ಹರೀಶ್ ಪೂಂಜ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನೆರಿಯ: ಪ್ರಕೃತಿ ಸಂರಕ್ಷಣೆ ಮತ್ತು ಉಳಿಸುವ ಸಂಕಲ್ಪ ಮಾಡಿ ಆ ಕಾಯಕಲ್ಪವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವ ನೆರಿಯದಂತಹ ಗ್ರಾಮ ನಮ್ಮ ತಾಲೂಕಿನಲ್ಲಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೊಳ್ಳುವಂತಹ ಮಾದರಿ ಗ್ರಾಮ ನೆರಿಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

 ನೆರಿಯ ವಿಶ್ವ ಹಿಂದು ಪರಿಷತ್ತು, ಬಜರಂಗದಳ ಗ್ರಾಮ ಸಮಿತಿ ನೆರಿಯ ಇದರ ವತಿಯಿಂದ ಅಣಿಯೂರು ಮೈದಾನದಲ್ಲಿ ಆಯೋಜಿಸಲಾದ ನೆರಿಯ ಕಬ್ಬಡಿ ಲೀಗ್( NKL) 2021 ಕ್ರೀಡೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಡೀ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಕೆಲಸವನ್ನು  ಹಾಗೂ ಇದರೊಂದಿಗೆ ಈ ಬಾರಿ ಪ್ರಕೃತಿ ಸರಂಕ್ಷಣೆಯ ಸಂಕಲ್ಪ ಮಾಡಿದ್ದು, ಆ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕೆಲಸವನ್ನು ನೆರಿಯ ಗ್ರಾಮ ಮಾಡುತ್ತಿದೆ. ಅಷ್ಟೇ ಅಲ್ಲದೇ ಇಲ್ಲಿರುವ ವನ ಸಿರಿ ಸಂಪತ್ತನ್ನು ಸಾಕ್ಷ್ಯ ಚಿತ್ರದಲ್ಲಿ ಹಿಡಿದಿಡುವ ಮೂಲಕ ನಮ್ಮ ಗ್ರಾಮ ಯಾವುದೇ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಮ್ಮಿ ಇಲ್ಲ, ನೈಸರ್ಗಿಕ ಸಂಪತ್ತಿನಿಂದ ಕೂಡಿರುವ ಈ ಪ್ರದೇಶವನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ಧಿಗೊಳ್ಳಿಸಿ ಗ್ರಾಮದ ಯುವಕರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಬೇಕು ಎಂಬ ಪರಿಕಲ್ಪನೆಯನ್ನು ಸಾಕ್ಷ್ಯ ಚಿತ್ರದ ಮೂಲಕ ಪ್ರಸ್ತುತ ಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಹ್ಯಾದ್ರಿ ಕ್ರಿಯೇಷನ್ಸ್ ಬಯಲು ನೆರಿಯ ಸಹಭಾಗಿತ್ವದಲ್ಲಿ ರಂಜನ್ ಕುಮಾರ್ ನೆರಿಯ ಇವರು ರಚಿಸಿರುವ “ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ಅಪ್ಪೆನ ಪ್ರತಿಷ್ಠಾ ಬಹ್ಮಕಲಶೋತ್ಸವ“ತುಳು ಆಲ್ಬಂ ಪೊಸ್ಟರ್ ರನ್ನು ಶಾಸಕರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ ವಿ.ಹಿ.ಪರಿಷತ್ ಸತೀಶ್ ಕುಳೆನಾಡಿ, ನೆರಿಯ ಗ್ರಾ.ಪಂ. ಅಧ್ಯಕ್ಷೆ ವಸಂತಿ, ಉದ್ಯಮಿ ಪ್ರದೀಪ್  ಬೆಂಗಳೂರು, ಗ್ರಾ.ಪಂ ಸದಸ್ಯ ಬಾಬು ಗೌಡ, ಸಚಿನ್ ಕೆ.ಆರ್. ಪುದುವೆಟ್ಟು ಗ್ರಾ.ಪಂ.ಅಧ್ಯಕ್ಷ ಯಶವಂತ್, ಪ್ರಮೋದ್ ಡಿಡುಪೆ, ವಿ.ಹಿ.ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಹೆಚ್.ಪಿ ಕಂಪನಿಯ  ಸುರೇಂದ್ರ, ತೀರ್ಪುಗಾರರು ಉಪಸ್ಧಿತರಿದರು. ಕಾರ್ಯಕ್ರಮನ್ನು ಹರೀಶ್ ವಿ.  ಸ್ವಾಗತಿಸಿ,ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.