ಬಳ್ಳಮಂಜ ಶೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಪನ್ನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ತುಳುನಾಡ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ 2020ನೇ ಏಪ್ರಿಲ್ ತಿಂಗಳಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ಮೇಷ ಜಾತ್ರೆಯು ಕೋವಿಡ್-19ರ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದು, ಸದ್ರಿ ಜಾತ್ರೆಯನ್ನು ಸರ್ವಪ್ರಾಯಶ್ಚಿತರೂಪ ಕಾದಲಶಯ್ಯಾ ಸಮರ್ಪಣೆಯೊಂದಿಗೆ ಫೆ.೨೬ರಂದು ಆರಂಭಗೊಂಡು ಮಾ.1ರವರೆಗೆ ವಿಜೃಂಭಣೆಯಿಂದ ಜರುಗಿತು.

ಜಾತ್ರಮಹೋತ್ಸವ ಅಂಗವಾಗಿ ಫೆ.27ರಂದು ಬೆಳಿಗ್ಗೆ ದರ್ಶನ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆದು, ಸಂಜೆ ಮಹಾ ರಥೋತ್ಸವ, ಚಕ್ರಾಬ್ಜಮಂಡಲ ಪೂಜೆ, ಕದಲಿ ಬಾಳೆಹಣ್ಣುಗಳಿಗೆ ಶಕ್ತಿಸಂಚಯನ, ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಶ್ರೀ ಭೂತಬಲಿ, ಕಾದಲಶಯ್ಯಾ ಸಮರ್ಪಣೆಯೊಂದಿಗೆ ಶ್ರೀ ದೇವರಶಯ್ಯೆ ನಡೆಯಿತು.

ಫೆ.28ರಂದು ಕವಾಟೋದ್ಘಾಟನೆ, ಅಪರಿಮಿತ ಕದಲೀಫಲಗಳ ಮಧ್ಯೆಯಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ದರ್ಶನ, ವಸಂತ ಸೇವೆ, ಕದಲೀ ಫಲಗಳ ಪ್ರಸಾದ ವಿತರಣೆ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನಡೆದು, ಸಂಜೆ ದೇವರಗುಂಡಿಯಲ್ಲಿ ಅವಭೃತ ಸ್ನಾನ, ಧ್ವಜಾವರೋಹಣ ನಡೆದು ಬಳಿಕ ಮಹಾಪೂಜೆ ನಡೆಯಿತು.

ಇಂದು( ಮಾ.1) ಬೆಳಿಗ್ಗೆ ಪ್ರಾತಃಕಾಲ ಮಹಾಸಂಪ್ರೋಕ್ಷಣೆ, ಮಹಾಪೂಜೆ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ| ಎಂ.ಹರ್ಷ ಸಂಪಿಗೆತ್ತಾಯ, ದೇವಳದ ಅರ್ಚಕರು, ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.