ನಾರಾವಿ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಾರಾವಿ ಇಲ್ಲಿ 32ವರ್ಷಗಳ ಕಾಲ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ ಜೀವಂಧರ್ ಕುಮಾರ್ ಬಳಕ್ಕ ರವರೀಗೆ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಇಂದು(ಫೆ.27) ಗೌರವಯುತವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷರಾದ ಎನ್.ಸುಧಾಕರ ಭಂಡಾರಿ ಹಾಗು ಉಪಾಧ್ಯಕ್ಷರಾದ ಸದಾನಂದ ಗೌಡ ರವರು ಶ್ರೀಯುತರ ಮುಂದಾಳತ್ವದಲ್ಲಿ ಸಂಘದ ಪ್ರಗತಿ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾ ಧಿಕಾರಿಯವರಾದ ಎನ್.ಶಶಿಕಾಂತ್ ಜೈನ್ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವಲಯಮೇಲ್ವಿಚಾರಕರಾದ ಶ್ರೀಸಿರಾಜುದ್ದೀನ್,ಎಲ್ಲಾ ನಿರ್ದೇಶಕರು ಹಾಗು ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಎನ್.ಜೀವಂಧರ್ ಕುಮಾರ್ ರವರು ಸಂಘವು ನಡೆದು ಬಂದ ರೀತಿ ಹಾಗು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಸಂಬಂಧದ ಬಗ್ಗೆ ವಿವರಿಸಿ ಕೃತಜ್ಞತೆ ಸಲ್ಲಿಸಿದರು. ನಿರ್ದೇಶಕರಾದ ಶ್ರೀವಿಠಲ ಪೂಜಾರಿಯವರು ಧನ್ಯವಾದವಿತ್ತರು.