ಬಳ್ಳಮಂಜದಲ್ಲಿ ಮೇಷ ಜಾತ್ರೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ತುಳುನಾಡ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ 2020ನೇ ಏಪ್ರಿಲ್ ತಿಂಗಳಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ಮೇಷ ಜಾತ್ರೆಯು ಕೋವಿಡ್-19ರ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದು ಸದ್ರಿ ಜಾತ್ರೆಯನ್ನು ಸರ್ವಪ್ರಾಯಶ್ಚಿತರೂಪ ಕಾದಲಶಯ್ಯಾ ಸಮರ್ಪಣೆಯೊಂದಿಗೆ ಫೆ.26ರಂದು ಪ್ರಾರಂಭಗೊಂಡಿದ್ದು, ಮಾ.1ರವರೆಗೆ ನಡೆಯಲಿದೆ.

ಜಾತ್ರಮಹೋತ್ಸವ ಅಂಗವಾಗಿ ಇಂದು ಬೆಳಗ್ಗೆ (ಫೆ.27) 7 ರಿಂದ ದರ್ಶನ ಬಲಿ,  ಮಹಾಪೂಜೆ, ಅನ್ನಸಂತರ್ಪಣೆ ನಡೆದಿದ್ದು, ಸಂಜೆ 6ಕ್ಕೆ ಮಹಾರಥೋತ್ಸವ  ನಡೆದು, ಚಕ್ರಾಬ್ಜಮಂಡಲ ಪೂಜೆ, ಕದಲೀ ಬಾಳೆಹಣ್ಣುಗಳಿಗೆ ಶಕ್ತಿಸಂಚಯನ, ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಶ್ರೀ ಭೂತಬಲಿ, ಕಾದಲಶಯ್ಯಾ ಸಮರ್ಪಣೆಯೊಂದಿಗೆ ಶ್ರೀ ದೇವರಶಯ್ಯೆ ನಡೆಯಲಿದೆ.

ಫೆ.28ರಂದು ಕವಾಟೋದ್ಘಾಟನೆ, ಅಪರಿಮಿತ ಕದಲೀಫಲಗಳ ಮಧ್ಯೆಯಲ್ಲಿ ಅನಂತೇಶ್ವರ ದೇವರ ದಿವ್ಯ ದರ್ಶನ, ವಸಂತಸೇವೆ, ಕದಲೀ ಫಲಗಳ ಪ್ರಸಾದ ವಿತರಣೆ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ 5ರಿಂದ ಅವಭೃತ, ಧ್ವಜಾರೋಹಣ, ಮಹಾಪೂಜೆ ಜರಗಲಿದೆ.

ಮಾ.1 ರಂದು ಪ್ರಾತಃಕಾಲ ಮಹಾಸಂಪ್ರೋಕ್ಷಣೆ, ಮಹಾಪೂಜೆ ನಡೆಯಲಿದೆ.

ಈ ಭಾರಿ ಮೇಷ ಜಾತ್ರೆಯು ಮೇ ತಿಂಗಳಲ್ಲಿ ನಡೆಯಲಿದೆ ಎಂದು ಆನುವಂಶೀಯ ಆಡಳಿತ ಮೊಕ್ತೇಸರರು ಡಾ| ಎಂ.ಹರ್ಷ ಸಂಪಿಗೆತ್ತಾಯ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.