ಬೊಳ್ಳುಕಲ್ಲು ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾಟ; ಯೋಧರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ: ಇಲ್ಲಿಯ ಬೊಳ್ಳುಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಬೊಳ್ಳುಕಲ್ಲು ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾಟ ಹಾಗೂ ಯೋಧರಿಗೆ ಸನ್ಮಾನ ಕಾರ್ಯಕ್ರಮ ಫೆ.27 ರಂದು ನಡೆಯಿತು.
ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬೇಬಿ ಗೌಡ ಪಿ.ಜೆ ರವರು ಕ್ರಿಕೆಟ್ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸ್ಥಳೀಯ ಶಾಲೆಯ ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಜನಾಬ್ ಹಸನಬ್ಬ ಅಲಕೆದಡ್ಡ ಅಧ್ಯಕ್ಷತೆ ವಹಿಸಿದ್ದರು. ಕಳಿಯ ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಗ್ರಾ.ಪಂ. ಸದಸ್ಯೆ ಶ್ವೇತಾ ಶ್ರೀನಿವಾಸ್, ಕಳಿಯ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಪೇರಾಜೆ, ಶಾಲಾ ಮುಖ್ಯ ಶಿಕ್ಷಕ ಶಿವಾನಂದ ಭಂಡಾರಿ,”ಸುದ್ದಿ ಪತ್ರಿಕೆ” ವರದಿ ಮತ್ತು ಜಾಹಿರಾತು ಪ್ರತಿನಿಧಿ ಕೆ.ನಾಣ್ಯಪ್ಪ ಗೌಡ, ಅಬ್ದುಲ್ ಖಾದರ್ ಕಲ್ಕುರ್ಣಿ, ಇರ್ಫಾನ್ ಸುಣ್ಣಲಡ್ಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

  

ಈ ಸಂದರ್ಭದಲ್ಲಿ ಯೋಧ ಬೇಬಿ ಗೌಡ ಪಿ.ಜೆ ರವರನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖ ಸನ್ಮಾನಿಸಿ ಗೌರವಿಸಲಾಯಿತು.
ಅಬ್ದುಲ್ ಗಫೂರು ಕಲ್ಕುರ್ಣಿ, ನಾಸಿರ್ ಬೊಳ್ಳುಕಲ್ಲು, ಇರ್ಷಾದ್ ಎರುಕಡಪು, ಅಝ್ಮಾನ್ ಪೆಲತ್ತಳಿಕೆ, ಅಶ್ರಫ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಸಾಮಾಜಿಕ ಕಾರ್ಯಕರ್ತ ಜನಾಬ್ ಯೂಸೂಫ್ ಕೆ.ಸ್ವಾಗತಿಸಿ, ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.