ಬೆಳಾಲು ಶ್ರೀ ಮಾಯಾ ಮಹಾದೇವ ದೇವಸ್ಥಾನದ ಜಾತ್ರಾ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಇಲ್ಲಿಯ ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.24ರಿಂದ 28 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ.

ಇದರ ಪ್ರಯುಕ್ತ  ಇಂದು(ಫೆ.27) ಬೆಳಿಗ್ಗೆ ಗಣಹೋಮ, ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಇಂದು ಸಂಜೆ ಗುರಿಪಳ್ಳ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ನಡೆಯಲಿದೆ. ಮಾಯಾಗುತ್ತು ಮನೆಯಿಂದ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಆಗಮನ,  ರಾತ್ರಿ ಪೂಜೆ,  ಶ್ರೀ ಮಾಯಾ ಮಹಾದೇವ ದೇವರ ರಥೋತ್ಸವ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಲಿದೆ.

ನಾಳೆ(ಫೆ.28) ಕವಾಟೋದ್ಘಾಟನೆ, ಮಹಾಪೂಜೆ, ಸಂಜೆ ಅವಭೃತ, ಧ್ವಜಾವರೋಹಣ, ರಂಗಪೂಜೆ, ಕ್ಷೇತ್ರದ ದೈವಗಳಿಗೆ ನೇಮೋತ್ಸವ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.