ಪುಂಜಾಲಕಟ್ಟೆ: ಅಗ್ನಿ ಅವಘಡ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಶಿಬಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ, ‘ರೋವರ್ಸ್&ರೆಂಜರ್ಸ್ ಘಟಕ ಹಾಗೂ ಭಾರತೀಯ ಯುವ ರೆಡ್ ಕ್ರಾಸ್ ಇದರ ಆಶ್ರಯದಲ್ಲಿ, ಅಗ್ನಿಶಾಮಕ ಠಾಣೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಅಗ್ನಿ ಅವಘಡ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನದ ಅಂಗವಾಗಿ ಮಾಹಿತಿ ಶಿಬಿರ ಹಾಗೂ ಪ್ರಾತ್ಯಕ್ಷಿಕೆಯನ್ನು  ನಡೆಯಿತು.
ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕ್ಲೇವಿಯಸ್ ಡಿ’ಸೋಜಾ, ರೋವರ್ಸ್ ಸಂಚಾಲಕ ಪ್ರೊ. ಆಂಜನೇಯ ಎಂ.ಎನ್, ರೆಂಜರ್ಸ್ ಸಂಚಾಲಕಿ ಪ್ರೊ. ಪ್ರೀತಿ ಕೆ ರಾವ್ ಮತ್ತು ಉಪನ್ಯಾಸಕರು, ಅಗ್ನಿಶಾಮಾಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಅಗ್ನಿಶಾಮಕ ಸಿಬ್ಬಂದಿ ಉಸ್ಮಾನ್ ಅಗ್ನಿ ಅವಘಡಗಳ ಬಗ್ಗೆ ಹಾಗೂ ಬೆಂಕಿ ಅವಘಡ ಸಂಭವಿಸಿದಾಗ ಸಾರ್ವಜನಿಕರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋವರ್ ವಸಂತ್ ಸ್ವಾಗತಿಸಿ, ರೋವರ್ ಶಮೀರ್ ಕಾರ್ಯಕ್ರಮ ನಿರೂಪಿಸಿ, ರೆಡ್‌ಕ್ರಾಸ್ ಸ್ವಯಂ ಸೇವಕಿ ದೀಕ್ಷಾ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.