ಗರ್ಡಾಡಿಯ ಸಬಿತಾ ಮೋನಿಸ್ ಗೆ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ: ನ್ಯೂನತೆ ಮೆಟ್ಟಿ ನಿಂತ ಸಾಧಕಿಗೆ ಸಂದ ಗೌರವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗರ್ಡಾಡಿ: ಸಾಧಿಸುವ ಛಲ ಹೊಂದಿದ್ದರೆ ಸತತ ಪ್ರಯತ್ನ ಮಾಡಿದರೆ ಸವಾಲು ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಜೀವಂತ ಸಾಕ್ಷಿ  ಗರ್ಡಾಡಿ ಗ್ರಾಮದ ನಿವಾಸಿ ಸಬಿತಾ ಮೋನಿಸ್. ಹೊಸದಿಲ್ಲಿ ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕರ್ನಾಟಕದ ಪತ್ರಿಕೆಗಳ ಸಂಘ ಜಂಟಿಯಾಗಿ ಕೊಡಮಾಡುವ 2021ನೇ ಸಾಲಿನ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿಗೆ ಭಾಜನರಾಗಿರುವ ಸಬಿತಾ ತಮಗಿದ್ದ ದೈಹಿಕ ನ್ಯೂನತೆಯನ್ನು ದಿಟ್ಟಿಸಿ ಇಂದು ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಹೌದು ಹುಟ್ಟುತ್ತಲೇ ತನ್ನ ಎರಡು ಕೈಗಳನ್ನು ಕಳೆದುಕೊಂಡ ಸಬಿತಾಗೆ ತಾನು ಓದಿ ಉನ್ನತ ಹುದ್ದೆ ಅಲಂಕರಿಸಬೇಕೆಂಬ ಇಂಗಿತ. ತಮ್ಮ ಮನದಾಸೆಯನ್ನು ನನಸು ಮಾಡಿಕೊಳ್ಳವ ಮಾರ್ಗವನ್ನು ಸ್ವತಃ ತಾವೇ ಕಂಡುಕೊಂಡ ಸಬಿತಾ ಕಾಲುಗಳ ಮೂಲಕವೇ ಪರೀಕ್ಷೆ ಬರೆದು ಉನ್ನತ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.

ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಬಿತಾ ಅವರ ಮತ್ತೊಂದು ವಿಶೇಷ ಸಾಧನೆ ಎಂದರೆ ಪ್ರತೀ ಸಾರ್ವತ್ರಿಕ ಚುನಾವಣೆಯಲ್ಲೂ ತಪ್ಪದೇ ಬಂದು ಕಾಲಿನಿಂದಲೇ ಮತ ಚಲಾಯಿಸುತ್ತಿದ್ದು, ಓರ್ವ ಸತ್ಪ್ರಜೆಯ ಕರ್ತವ್ಯವನ್ನು ಎತ್ತಿ ಹಿಡಿಯುವ ಮೂಲಕ ರಾಜ್ಯದ ಗಮನ ಸೆಳೆಯುತ್ತಲೇ ಬಂದಿದ್ದಾರೆ.  ಇವರ ಈ ವಿಶೇಷ ಸಾಧನೆಯನ್ನು ಅಸಾಮಾನ್ಯ ಸಾಧನೆ ಎಂದು ಪರಿಗಣಿಸಿ ಅವರಿಗೆ ಈ ಪುರಸ್ಕಾರವನ್ನು ನೀಡುತ್ತಿದ್ದೇವೆ ಎಂದು ಆಯ್ಕೆ ಮಂಡಳಿ ಘೋಷಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.