
ತಣ್ಣೀರುಪಂತ: ಇಲ್ಲಿಯ ಅಳಕೆ ಮಸೀದಿ ಬಳಿಯ ನಿವಾಸಿಯೋರ್ವರು ವಿಟ್ಲ-ಪುತ್ತೂರು ರಸ್ತೆಯ ಕಂಬಳಬೆಟ್ಟು ಬದನಾಜೆ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಫೆ.25 ರಂದು ನಡೆದಿದೆ.
ಘಟನೆಯ ವಿವರ: ಪುತ್ತೂರು ಕಡೆಯಿಂದ ವಿಟ್ಲದ ಕಡೆಗೆ ತೆರಳುತ್ತಿದ್ದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ವಿಟ್ಲದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತಣ್ಣೀರುಪಂತ ಗ್ರಾಮದ ಅಳಕ್ಕೆ ನಿವಾಸಿ ಇಸ್ಮಾಯಿಲ್(22.ವ) ಹಾಗೂ ಸಹಸವಾರ ಇಸ್ಮಾಯಿಲ್ ರವರ ದೊಡ್ಡಪ್ಪ ಅಬ್ಬಾಸ್(52.ವ) ಎಂಬವರು ರಸ್ತೆಗೆಸೆಯಲ್ಲಟ್ಟಿದ್ದು, ಇಸ್ಮಾಯಿಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಹ ಸವಾರ ಅಬ್ಬಾಸ್ ರವರು ಗಂಭೀರ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯರ ಸಹಕಾರದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಬೈಕ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.