ಪುಂಜಾಲಕಟ್ಟೆ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗುಲಾಬಿ ಅಭಿಯಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ರೋಟರಿ ಕ್ಲಬ್ ಮಡಂತ್ಯಾರು, ಜೇಸಿಐ ಮಡಂತ್ಯಾರು, ರಾಷ್ಟ್ರೀಯ ಸೇವಾಯೋಜನೆ ಘಟಕ ಪುಂಜಾಲಕಟ್ಟೆ ಹಾಗೂ ಆರಕ್ಷಕ ಠಾಣೆ ಪುಂಜಾಲಕಟ್ಟೆ ಇದರ ಸಹಯೋಗದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗುಲಾಬಿ ಅಭಿಯಾನ ಕಾರ್ಯಕ್ರಮವು ಫೆ.24 ರಂದು  ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್‌ಸ್ಕೂಲ್  ಪ್ರೌಢಶಾಲಾ ವಿಭಾಗದಲ್ಲಿ  ಜರುಗಿತು.

ಕಾರ್ಯಕ್ರಮವನ್ನು ಮಡಂತ್ಯಾರು ರೋಟರಿ ಕ್ಲಬ್‌ನ ಅಧ್ಯಕ್ಷ  ಜಯಂತ್ ಶೆಟ್ಟಿ  ರವರು ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಜನಸಂಖ್ಯೆಯು ದಿನದಿಂದ ದಿನ ಏರಿಕೆಯಾಗುತಿದೆ. ಜನಸಂಖ್ಯೆ ವೃದ್ಧಿಯಾಗುತ್ತಿದ್ದಂತೆ ಮೌಲ್ಯಾಧಾರಿತ ಬದುಕು ವೃದ್ಧಿಯಾಗಬೇಕು. ಆದರೆ ನಮ್ಮ ದೇಶದಲ್ಲಿ ಈ ಏರಿಕೆಯ ಪ್ರಮಾಣ ಕುಸಿಯುತ್ತಿದೆ. ಇದಕ್ಕೆ ಮೂಲ ಕಾರಣ ದುಶ್ಚಟಕ್ಕೆ ನಮ್ಮ ಯುವಪಡೆ ಬಲಿಯಾಗುತ್ತಿರುವುದು. ಆದ್ದರಿಂದ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ತಾವು ಈ ಪ್ರಾಯದಲ್ಲಿಯೇ ದುಶ್ಚಟಕ್ಕೆ ದಾಸರಾಗದೇ ಸನ್ಮಾರ್ಗದಲ್ಲಿ ನಡೆಯಬೇಕು. ಆಗ ಮೌಲ್ಯಾಧಾರಿತ ಬದುಕು ತಮ್ಮದಾಗಲು ಸಾಧ್ಯ ಎಂಬುವುದನ್ನು ಅರಿತುಕೊಂಡು ನಡೆಯಿರಿ. ಈ ಕಾರ್ಯವನ್ನು ಅರಿತುಕೊಂಡು ಮಾಡಿದಾಗ ಮಾನವ ಸಂಪನ್ಮೂಲದ ಸದ್ಬಳಕೆಯಾಗುತ್ತದೆ ಎಂದರು.

ಜೇಸಿಐ ಮಡಂತ್ಯಾರಿನ ಅಧ್ಯಕ್ಷ ಜೇಸಿ ಪ್ರಸನ್ನ ಶೆಟ್ಟಿ ಮಾತನಾಡಿ, ಬದಲಾವಣೆ ಎನ್ನುವ ಕಾರ್ಯವು ಮೊದಲು ನಮ್ಮಿಂದಲೇ ಆರಂಭಗೊಳ್ಳಲಿ. ಆಗ ಸಮಾಜವು ನಮ್ಮ ಕಡೆ ಕಣ್ಣೆತ್ತಿ ನೋಡುತ್ತದೆ. ಅಂತಹ ಕಾರ್ಯಕ್ಕೆ ಪುಂಜಾಲಕಟ್ಟೆ ಶಾಲೆಯ ವಿದ್ಯಾರ್ಥಿಗಳು ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಮಡಂತ್ಯಾರು  ಗ್ರಾ.ಪಂ ಸದಸ್ಯ ಕಿಶೋರ್ ಶೆಟ್ಟಿ ,ಜೇಸಿ ಅಶೋಕ್ ಭಂಡಾರಿ ಉಪಸ್ಥಿತರಿದ್ದು ಸಹಕರಿಸಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿ, ಕೆ.ಪಿ.ಎಸ್ ಪುಂಜಾಲಕಟ್ಟೆಯ ಉಪಪ್ರಾಂಶುಪಾಲ ಉದಯ ಕುಮಾರ್ ಬಿ. ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಕಲಾಶಿಕ್ಷಕ ಧರಣೇಂದ್ರ ಕೆ. ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸತ್ಯಕಿರಣ್ ಕುಮಾರ್ ಇವರ ಧನ್ಯವಾದವಿತ್ತರು. ವಿದ್ಯಾರ್ಥಿಗಳ ಪೋಷಕರು ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.