ವೇಣೂರು: ವೇಣೂರು ಗ್ರಾಮ ಪಂಚಾಯತ್ ವತಿಯಿಂದ ‘ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ’ ವಿಶೇಷ ಜಾಗ್ರತಿ ಆಂದೋಲನ ಜರುಗಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿ, ವೇಣೂರು ಗ್ರಾಮ ಪಂಚಾಯತ್ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಹಲವಾರು ಕ್ರಮ ಕೈಗೊಂಡಿದ್ದು ಪೇಟೆಯಲ್ಲಿ ವಾಹನದ ಮೂಲಕ ಕಸವನ್ನು ಸಂಗ್ರಹಿಸಿ ಬಜಿರೆ ಡಂಪಿಂಗ್ ಯಾರ್ಡ್ನಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ಶೋಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯರುಗಳಾದ ಸತೀಶ್ ಹೆಗ್ಡೆ, ಲಕ್ಷ್ಮಣ ಪೂಜಾರಿ, ಜೆಸ್ಸಿ ಟೀಚರ್, ಮಾರ್ಗರೇಟ್ ಕೊರೆಯ, ಯಶೋಧರ ಹೆಗ್ಡೆ, ಅಣ್ಣು, ಪುಷ್ಪ ,ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರುಗಳಾದ ಅನೂಪ್ ಜೆ ಪಾಯಸ್, ಝಕ್ರಿಯಾ, ಸ್ಥಳೀಯರಾದ ಹೊನ್ನಯ ಕಾಟಿಪಳ್ಳ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.