ಕುಪೆಟ್ಟಿಯಲ್ಲಿ ಶ್ರೀ ಗಣೇಶ ಭಜನಾ ಮಂದಿರ ಸಭಾಭವನದ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಯುವಕರಲ್ಲಿ ಧರ್ಮದ ಅರಿವು ಮೂಡಿಸುವಲ್ಲಿ ಭಜನಾ ಮಂದಿರಗಳು ಅವಶ್ಯಕ: ಹರೀಶ್ ಪೂಂಜ

ಬೆಳ್ತಂಗಡಿ: ಕುಪೆಟ್ಟಿಯಲ್ಲಿ ಶ್ರೀ ಗಣೇಶ  ಭಜನಾ ಮಂದಿರ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ ಫೆ.24 ರಂದು ಜರುಗಿತು. ಶಾಸಕ ಹರೀಶ್ ಪೂಂಜ ಸಭಾಭವನದ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿ, ಯುವಕರಲ್ಲಿ ಧರ್ಮದ ಅರಿವು ಮೂಡಿಸುವಲ್ಲಿ ಭಜನಾ ಮಂದಿರಗಳು ಅವಶ್ಯಕ. ಊರಿನ ಜನರು ಎಲ್ಲರೂ ಸೇರಿದರೆ ಇಂತಹ ಸಭಾಭವನದ ನಿರ್ಮಾಣದ ಕಾರ್ಯ ಕಷ್ಟವಲ್ಲ. ತಾಲೂಕಿನ ಶಾಸಕನಾಗಿ ನನ್ನಿಂದಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.


ಮುಖ್ಯ ಅತಿಥಿ ರೈತಬಂಧು ಆಹಾರೋದ್ಯಮದ ಮಾಲಕ ಶಿವಶಂಕರ ನಾಯಕ್ ಮಾತನಾಡಿ ಇಂತಹ ಪುಣ್ಯ ಕಾರ್ಯದಲ್ಲಿ ಕೋಟಿ ಕೊಟ್ಟವರೂ ಹಾಗೂ ಹತ್ತು ರೂಪಾಯಿ ಕೊಟ್ಟವರು ಎಲ್ಲರೂ ಒಂದೇ ಎಂಬ ದೃಷ್ಟಿಯಿಂದ ನೋಡಬೇಕು ಎಂದರು.
ಪ್ರಗತಿ ಶಿಕ್ಷಣ ಸಂಸ್ಥೆ ಕಾಣಿಯೂರು ಇದರ ಸಂಚಾಲಕ ಜಯಸೂರ್ಯ ರೈ ಮಾಲಾಡಿ ಮಾತನಾಡಿ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕೃತಿಯನ್ನು ಕಲಿಸಬೇಕು ಮತ್ತು ಭಜನಾಮಂದಿರದ ಮೂಲಕ ಇಂತಹ ಕಾರ್ಯ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಕುಮಾರ್ ಕಡ್ತಿಲ, ಭಜನಾ ಮಂದಿರ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಸುಧೀರ್ ಕೆ. ಎನ್ ಹಲೇಜಿ, ಸಮಿತಿಯ ಅಧ್ಯಕ್ಷ ಪ್ರವೀಣ್ ಕುಪ್ಪೆಟ್ಟಿ, ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಕಾಶ್ ವಾದ್ಯಕೊಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸುಧೀರ್ ಕೆ.ಎನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.