ಬೆಳ್ತಂಗಡಿ; ಏರುಗತಿಯಲ್ಲಿ ಸಾಗಿದ್ದ ಅಡಿಕೆ ಬೆಲೆ ಇಳಿಮುಖವಾಗುತ್ತಿರುವುದು ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಸ್ಥಿರೀಕರಣಗೊಳ್ಳಲಿದೆ ಎಂದು ಬೆಳ್ತಂಗಡಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಬಾಲಕೃಷ್ಣ ವಿ ಶೆಟ್ಟಿ ಸಾಲಿಗ್ರಾಮ ತಿಳಿಸಿದ್ದಾರೆ.
ಸಹಕಾರಿ ಮಾರುಕಟ್ಟೆ ಸಂಘಗಳಂತೆ ತಾಲೂಕಿನ ಖಾಸಗಿ ಅಡಿಕೆ ವರ್ತಕರು ಕೃಷಿಕರ ಹಿತವನ್ನು ಕಾಪಾಡಲು ಬದ್ಧರಾಗಿದ್ದು, ಇತ್ತೀಚೆಗೆ ಇಳಿಮುಖವಾಗುತ್ತಿರುವ ಬೆಲೆಯಿಂದ ಯಾರೊಬ್ಬರೂ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನಷ್ಟು ಸುಧಾರಿಸಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲಿದೆ. ಅಡಿಕೆ ಬೆಳೆಗಾರರು ಗೊಂದಲಕ್ಕೀಡಾಗದೆ ಅನಿವಾರ್ಯತೆಗೆ ತಕ್ಕಂತೆ ಅಡಿಕೆಯನ್ನು ಮಾರುಕಟ್ಟೆಗೆ ತರಬೇಕೆಂದು ಅಡಿಕೆ ವರ್ತಕರ ಸಂಘ ಹೇಳಿಕೆ ಮೂಲಕ ಕೃಷಿಕರನ್ನು ವಿನಂತಿಸಿದ್ದಾರೆ.