ಬೆಳ್ತಂಗಡಿ: ಭಾರತ ದೇಶದ ಹೂಡಿಕೆದಾರರ ಪ್ರತಿಷ್ಠಿತ ಸಂಸ್ಥೆಯಾದ ಯು.ಟಿ.ಐ ಮ್ಯೂಚುವಲ್ ಫಂಡ್ನ ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯ ಹೂಡಿಕೆ ಸಲಹಾ ಕೇಂದ್ರವು ಬೆಳ್ತಂಗಡಿಯ ಪಿಂಟೋ ಕಾಂಪ್ಲೆಕ್ಸ್ನಲ್ಲಿ ಫೆ.25ರಂದು ಶುಭಾರಂಭಗೊಂಡಿತು.
ಯು.ಟಿ.ಐ ಮ್ಯೂಚುವಲ್ ಫಂಡ್ನ ಕರ್ನಾಟಕ ಪ್ರಾಂತೀಯ ವಿಭಾಗದ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿರುವಕೆ.ವಿ.ರವಿ ಕುಮಾರ್ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ದಕ್ಷಿಣ ವಿಭಾಗದ ಮುಖ್ಯಸ್ಥರಾದದಿವಾಕರ ಎ. ಕಲ್ಯಾಣಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ .ಕೆ. ರವಿ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೋನಪ್ಪ ಕಂಡೆತ್ಯಾರ್, ನಾಗರಾಜ್, ಆದಿತ್ಯ ರಾವ್, ಶ್ರೀಧರ ರಾವ್ ಪಾರೆಂಕಿ ಮೊದಲಾದ ಗಣ್ಯರು ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಗ್ರಾಮಾಂತರ ವಿಭಾಗದ ಜನರಿಗೆ ಯು.ಟಿ.ಐ. ಮ್ಯೂಚುವಲ್ ಫಂಡ್ನ ಅಡಿಯಲ್ಲಿ ಲಭ್ಯವಿರುವಸೇವೆ, ಮ್ಯೂಚುವಲ್ ಫಂಡ್ಪ್ರಸ್ತುತ ಸೇವೆಗಳಲ್ಲಿ ಜನಪ್ರಿಯವಾಗಿರುವ ಮಾಸಿಕ ಉಳಿತಾಯ ಯೋಜನೆ, ಪಿಂಚಣಿ ಯೋಜನೆ, ಮಕ್ಕಳ ಭವಿಷ್ಯತ್ತಿನ ಯೋಜನೆ ಗಳು ಹಾಗೂ ಮಾರುಕಟ್ಟೆ ಆಧಾರಿತ ಉಳಿತಾಯ ಯೋಜನೆ ಹಾಗೂ ಮ್ಯೂಚುವಲ್ ಫಂಡ್ ಉಳಿತಾಯ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡಿದರು.