ಬೆಳಾಲು: ಶ್ರೀ ಮಾಯಾ ಮಹಾದೇವ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಪಿಸುವ ಮೂಲಕ ಚಾಲನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಫೆ.24ರಂದು ಚಾಲನೆ ದೊರೆತಿದೆ.

ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಇಂದು ಪ್ರಾರಂಭಗೊಂಡಿರುವ ಈ ಜಾತ್ರ ಮಹೋತ್ಸವ ಫೆ.24ರಿಂದ 28 ರವರೆಗೆ ನಡೆಯಲ್ಲಿದ್ದು, ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜಾತ್ರಾ ಮಹೋತ್ಸವ ಹಿನ್ನಲೆ ಇಂದು(ಫೆ.೨೪) ಬೆಳಿಗ್ಗೆ ಗಣಹೋಮ, ಮಾಯಾಗುತ್ತು ಮನೆಯಲ್ಲಿ ದೈವಗಳಿಗೆ ಪರ್ವ, ಗೊನೆ ಕಡಿಯುವುದು, ಊರವರಿಂದ ಹೊರೆಕಾಣಿಕೆ ಸಮರ್ಪಣೆ ನಡೆದಿದ್ದು, ಇಂದು ಸಂಜೆ ತಂತ್ರಿಗಳ ಸ್ವಾಗತ, ತೋರಣ ಮೂಹೂರ್ತ, ರಾತ್ರಿ ಧ್ವಜಾರೋಹಣ ಮೂಲಕ ಜಾತ್ರೆಗೆ ಚಾಲನೆ ದೊರೆಯಲಿದೆ.

ಫೆ. ೨೫ ರಂದು ಬೆಳಿಗ್ಗೆ ಸಾಮೂಹಿಕ ಶನೈಶ್ವರ ಪೂಜೆ, ರಾತ್ರಿ ಉತ್ಸವ, ಬಾಲಪ್ರತಿಭೆ ಅನನ್ಯಾ ವಿ.ಎಸ್. ಇವರಿಂದ ನೃತ್ಯ ವೈವಿಧ್ಯ, ಅಮ್ಮ ಕಲಾವಿದರು ಬಳಗದಿಂದ “ಪರಕೆ ಪೂವಕ್ಕೆ” ತುಳು ಹಾಸ್ಯಮಯ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ.

ಫೆ. ೨೬ ರಂದು ರಾತ್ರಿ ಚಂದ್ರ ಮಂಡಲ ಉತ್ಸವ, ವಿಷ್ಣು ಕಲಾವಿದರ ತಂಡದಿಂದ “ನಾಲೆಕ್ಕ್ ನಾಲ್ ತುಳು ಸಾಂಸಾರಿಕ ನಾಟಕ ನಡೆಯಲಿದೆ. ಫೆ.೨೭ರಂದು ಬೆಳಿಗ್ಗೆ ದರ್ಶನ ಬಲಿ, ರಾತ್ರಿ ರಥೋತ್ಸವ, ಶ್ರೀ ಭೂತ ಬಲಿ, ಶಯನೋತ್ಸವ, ಫೆ. ೨೮ ರಂದು ಕವಾಚೋದ್ಘಾಟನೆ, ಮಹಾಪೂಜೆ ಸಂಜೆ ಅವಭೃತ, ಧ್ವಜಾವರೋಹಣ, ರಂಗಪೂಜೆ, ಕ್ಷೇತ್ರದ ದೈವಗಳಿಗೆ ನೇಮೋತ್ಸವ ಜರಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.