ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ನ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕಾಶಿಬೆಟ್ಟುವಿನಲ್ಲಿ ನಿರ್ಮಾಣಗೊಂಡು ಫೆ.28 ರಂದು ಉದ್ಘಾಟನೆಗೊಳ್ಳುತ್ತಿರುವ ಸುವರ್ಣ ಸೌಧಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕೊಡಮಾಡಿದ ರೂ. 10 ಲಕ್ಷ ಧನಸಹಾಯದ ಚೆಕ್ಕನ್ನು ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ರೋಟರಿ ಕ್ಲಬ್ಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಸಮುದಾಯ ಅಭಿವೃದ್ಧಿ ವಿಭಾಗದ ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್, ರೋಟರಿ ಸೇವಾ ಟ್ರಸ್ಟ್ನ ಅಧ್ಯಕ್ಷ ಎಂ.ವಿ.ಭಟ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ, ಶ್ರೀಕಾಂತ ಕಾಮತ್, ಶಶಿಧರ ಡೋಂಗ್ರೆ, ಸುನೀಲ್ ಶೆಣೈ, ಬಾಬು ಪೂಜಾರಿ, ಮಿಥುನ್ ಮಾಡ್ತಾ, ಶ್ರೀನಾಥ್ ಕೆ.ಎಂ ಉಪಸ್ಥಿತರಿದ್ದರು.