ಉಜಿರೆ: ಟೈಲರ್ಸ್ ಅಸೋಸಿಯೇಷನ್ಸ್ ವಲಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ಉಜಿರೆ, ಇದರ 2021-22ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಫೆ.24ರಂದು ನಡೆಯಿತು.

ಉಜಿರೆ ಶಾರದ ಮಂಟಪದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ವೇದಾವತಿ ಜನಾರ್ದನ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ರೂಪಾ ಫೇಮಸ್ ಟೈಲರ್ ಉಜಿರೆ, ಕೋಶಾಧಿಕಾರಿಯಾಗಿ ಶುಭಲತಾ ಕನ್ಯಾಡಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಉಜಿರೆ ಪ್ರಸಿದ್ಧಿ ಟೈಲರ್ ನ ಉಮೇಶ್ ಮತ್ತು ವೇದಾವತಿ ಕನ್ಯಾಡಿ ಆಯ್ಕೆಯಾಗಿದ್ದು, ಜೊತೆ ಕಾರ್ಯದರ್ಶಿಯಾಗಿ ನಾಗೇಶ್ ಮತ್ತು ಉಷಾ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಾವತಿ, ಉಮಾಶ್ರೀ ಮತ್ತು ಜ್ಯೋತಿ ಆಯ್ಕೆಯಾಗಿದ್ದಾರೆ.

ತಾಲೂಕು ಸಮಿತಿ ಸದಸ್ಯರಾಗಿ ಉಜಿರೆ ಫ್ಯಾಶನ್ ಲುಕ್ ನ ನಾಗೇಶ್ , ಫೇಮಸ್ ಟೈಲರ್ ನ ಜಯಂತಿ, ರೇವತಿ ಮತ್ತು ದಿವ್ಯಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.