ಬೆಳ್ತಂಗಡಿ: ಸೋಯ ಪನ್ನೀರ್ ಗೃಹ ಉತ್ಪನ್ನ ಸಣ್ಣ ಘಟಕ ಪ್ರಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಾಲಘಟ್ಟ ಬದಲಾಗುತ್ತಿದ್ದಂತೆ ಮನುಷ್ಯನ ಜೀವನ ಶೈಲಿಯೂ ಬದಲಾಗುತ್ತಿದ್ದು, ಆಹಾರ ಪದ್ಧತಿ ಕ್ರಮದಲ್ಲಿಯೂ ಬದಲಾವಣೆಗಳಾಗುತ್ತಿದೆ. ಈ ನಿಟ್ಟಿನಲ್ಲಿ ಸದ್ಯ ಪ್ರತಿಯೋರ್ವರು ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುವುದು ಅನಿವಾರ್ಯವಾಗಿದ್ದು, ಮನೆಯ ಉತ್ಪನ್ನಗಳು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದು ಸೋಯ ಪನ್ನೀರ್ ಘಟಕದ ಮಾಲಕ ರಾಕೇಶ್ ಶೆಟ್ಟಿ ತಿಳಿಸಿದರು.

ಸೋಯ ಪನ್ನೀರ್ ಎನ್ನುವ ಸಣ್ಣ ಘಟಕ ಆರಂಭಿಸಿರುವ ರಾಕೇಶ್ ತಮ್ಮ ಘಟಕದ ಕುರಿತು ಫೆ.24ರಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ತಾವೇ ಮನೆಯಲ್ಲಿ ಉತ್ಪಾದಿಸಿ ಸಿದ್ಧಪಡಿಸುತ್ತಿರುವ ಸೋಯ ಪನ್ನೀರ್ ಉತ್ಪನ್ನದ ಬಗ್ಗೆ ಮಾಹಿತಿ ಹಂಚಿಕೊಂಡರು.

ಮೂಲತ: ಬೆಳ್ತಂಗಡಿ ಅವರಾಗಿರುವ ರಾಕೇಶ್ ಶೆಟ್ಟಿ ವೃತ್ತಿಯಲ್ಲಿ ಡಿಪ್ಲೋಮಾ ಇಂಜಿಯರ್ ಆಗಿದ್ದರು. ಆದರೆ ಲಾಕ್ ಡೌನ್ ಬಳಿಕ ತಮ್ಮದೇ ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಆಸೆ ಹುಟ್ಟಿಕೊಂಡ ಕಾರಣ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದ ರಾಕೇಶ್ ವೃತ್ತಿಯನ್ನು ತ್ಯಜಿಸಿ, ಪ್ರವೃತ್ತಿಯತ್ತ ಮುಖ ಮಾಡಿದ್ದಾರೆ. ಇದರ ಪ್ರತಿಫಲವಾಗಿ ಇಂದು ಬೆಳ್ತಂಗಡಿ ಚರ್ಚ್ ರಸ್ತೆಯಲ್ಲಿರುವ ತಮ್ಮದೇ ಸ್ವಗೃಹದಲ್ಲಿಯೇ ಸೋಯ ಪನ್ನೀರ್ ಎಂಬ ಸಣ್ಣ ಘಟಕವನ್ನು ಪ್ರಾರಂಭಿಸಿದ್ದಾರೆ.

ದಿನ ನಿತ್ಯದ ಆಹಾರ ಬಳಕೆಯಲ್ಲಿ ಕಡಿಮೆ ಕೊಬ್ಬಿನಂಶ ಉಳ್ಳ ಹಾಗೂ ಅಧಿಕ ಪ್ರೋಟಿನ್ ಉಳ್ಳ ಸೋಯ ಪನ್ನೀರ್ ನಲ್ಲಿ ಹಲವಾರು ರೋಗ ನಿರೋಧಕ ಶಕ್ತಿ ಇದ್ದು,ಸೂಟು ಹಾಲಿನಿಂದ ತಯಾರಿಸಿದ ಪನ್ನೀರ್ ಮಕ್ಕಳಿಗೆ, ದೊಡ್ಡವರಿಗೆಷ್ಟೆವಲ್ಲ, ವಯೋವೃದ್ಧರ ಆರೋಗ್ಯವನ್ನು ಸದೃಢಗೊಳ್ಳಿಸುವಲ್ಲಿ ಸಹಕಾರಿಯಾಗಿದೆ ಎಂದರು. ಇನ್ನು ಪತ್ರಿಕಾಗೋಷ್ಠಿಯಲ್ಲಿ ಸೆನಾವು ಪಿಂಟೋ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.