ಫೆ.28: ಕಾಶಿಬೆಟ್ಟು ಅರಳಿಯಲ್ಲಿ ರೋಟರಿ ಸೇವಾ ಟ್ರಸ್ಟ್ ಸಭಾಭವನ ಲೋಕಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ ಹಲವಾರು ಜನಸೇವೆಯೊಂದಿಗೆ ಮುನ್ನಡೆಯುತ್ತಾ ಸಮಾಜದ ಮುಂದಿನ ಅಗತ್ಯಗಳಿಗೆ ಧನಾತ್ಮಕವಾಗಿ ಸ್ಪಂಧಿಸುವ ನಿಟ್ಟಿನಲ್ಲಿ ಕಾಶಿಬೆಟ್ಟು ಅರಳಿ ರಸ್ತೆಯಲ್ಲಿ ವಿವಿಧ ಸೇವಾ ಚಟುವಟಿಕೆಗಳಿಗೆ ಪೂರಕವಾಗಿ 8600ಚದರ ಅಡಿಯ ರೋಟರಿ ಸೇವಾಟ್ರಸ್ಟ್ ಸಭಾಭವನ ಫೆ. 28 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ರೋಟರಿ ಸುವರ್ಣ ವರ್ಷದ ಅಧ್ಯಕ್ಷ ರೋ. ಬಿ. ಕೆ ಧನಂಜಯ ರಾವ್ ಹೇಳಿದರು.


ಅವರು ಫೆ. 24 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸಮಾಜ ಸೇವಾ ಉದ್ದೇಶದಿಂದ ಪ್ರಾರಂಭಿಸಿದ ರೋಟರಿ ಸಂಘಟನೆಗೆ ಭಾರತದಲ್ಲಿ ಶತಮಾನದ ಇತಿಹಾಸ ಬೆಳ್ತಂಗಡಿ ಸಂಸ್ಥೆಗೆ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ ಬೆಳ್ತಂಗಡಿಯ ಆನ್ಸ್ ಕ್ಲಬ್‌ಗೆ ದಶಮಾನೋತ್ಸವದ ಸಡಗರ.
ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಪ್ರೊ|| ಎನ್ .ಜೆ ಕಡಂಬರ ಸ್ಥಾಪಕ ಅಧ್ಯಕ್ಷತೆಯಲ್ಲಿ ಸುಧೀರ್ ಜಿ. ಭಿಡೆಯವರ ಸ್ಥಾಪಕ ಕಾರ್ಯದರ್ಶಿಯಲ್ಲಿ ಪ್ರಾರಂಭಗೊಡಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಗೌರವ ಸದಸ್ಯರಾಗಿದ್ದು. ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿರುವ 80 ಸದಸ್ಯರನ್ನು ಹೊಂದಿದೆ. ಸಹ ಸಂಸ್ಥೆಗಳಾದ 4 ರೋಟರಿ ಸಮುದಾಯದಳಗಳು 8 ಇಂಟರಾಕ್ಟ್ ಕ್ಲಬ್‌ಗಳು, ಹಾಗೂ ಆನ್ಸ್‌ಕ್ಲಬ್ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

49 ವರ್ಷಗಳಲ್ಲಿ ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿ ಸುವರ್ಣ ಮಹೋತ್ಸವದ ಈ ವರ್ಷ 700 ಕ್ಕೂ ಮಿಕ್ಕಿ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಬೆಳ್ತಂಗಡಿ ಸರಕಾರಿ ಮಾದರಿ ಶಾಲೆಯ ಆವರಣದಲ್ಲಿ 4 ದಶಕಗಳ ಹಿಂದೆ ಪ್ರಾರಂಭವಾದ ರೋಟರಿ ಶಿಶು ಸೌಧ ರೋಟರಿ ಸೇವಾ ಚಟುವಟಿಕೆಗಳ ಕೇಂದ್ರ. ಕ್ಲಬ್ ನ ಸದಸ್ಯರಾಗಿದ್ದ ದಿ| ಕೆ. ರಮಾನಂದ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ರೋಟರಿ ಸೇವಾಟ್ರಸ್ಟ್ ಪ್ರಾರಂಭಗೊಂಡು ಇಚರ ನೇತೃತ್ವದಲ್ಲಿ ವಿಶಾಲವಾದ ಒಳಾಂಗಣ ಕ್ರೀಡಾಂಗಣ, ಕೆ. ರಮಾನಂದ ಸಾಲ್ಯಾನ್ ಸ್ಮರಣಾರ್ಥ ಹವಾ ನಿಯಂತ್ರಿತ ಸಭಾಂಗಣ ರೋಟರಿ ಸದಸ್ಯರ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆಯು ಜನ ಸಾಮಾನ್ಯರಿಗೆ ಉಪಯುಕ್ತವಾದ ಸುಮಾರು 600 ಕ್ಕೂ ಮಿಕ್ಕಿ ಸಾಮಾಜಿಕ ಕಾಯಕ್ರಮಗಳನ್ನು ಸಂಘಟಿಸಿದೆ. ರೋಟರಿ ಸಭಾಭವನದ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿರುವರು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ರೊ. ಪ್ರತಾಪ್‌ಸಿಂಹ ನಾಯಕ್, ರೋಟರಿ ಸಹಾಯಕ ಗವರ್ನರ್ ಡಾ| ಯತಿ ಕುಮಾರ್ ಸ್ವಾಮಿ ಗೌಡ, ವಲಯ ಸೇನಾನಿ ಮೋನಪ್ಪ ಪೂಜಾರಿ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೋಟರಿ ಗವರ್ನರ್ ಎಮ್ ರಂಗನಾಥ ಭಟ್ ರವರ ಅಧಿಕೃತ ಭೇಟಿ ನಡೆಯಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ರೋಟರಿ ಸೇವಾ ಟ್ರಸ್ಟ್ ಅಧ್ಯಕ್ಷ ಜನರಲ್ ಮೇಜರ್ ನಿವೃತ್ತ ಎಂ.ವಿ. ಭಟ್, ಕಾರ್ಯದರ್ಶಿ ರೊ ಡಾ| ಶಶಿಧರ ಡೋಂಗ್ರೆ, ಕೋಶಾಧಿಕಾರಿ ರೊ. ಶ್ರೀಕಾಂತ್ ಕಾಮತ್, ರೋಟರಿ ಕ್ಲಬ್ ಕಾರ್ಯದರ್ಶಿ ರೊ ಶ್ರೀಧರ್ ಕೆ.ವಿ, ಕೋಶಾಧಿಕಾರಿ ಮಿಥುನ್ ಮಾತ್ತ, ನಿಯೋಜಿತ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ, ಪೂರ್ವ ಅಧ್ಯಕ್ಷ ರೊ. ದಯಾನಂದ ನಾಯಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.