ಬೆಳ್ತಂಗಡಿ: ಮಂಗಳೂರು ವಿ.ವಿ ವಲಯ ಮಟ್ಟದ ಖೋ ಖೋ ಪಂದ್ಯಾಟ ಉದ್ಫಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಮಂಗಳೂರು ವಿ.ವಿ ವಲಯ ಮಟ್ಟದ ಖೋ ಖೋ ಪಂದ್ಯಾಟ ಫೆ.23 ರಂದು ನಡೆಯಿತು.

ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಮಂಗಳೂರು ವಿ.ವಿ ವಲಯ ಮಟ್ಟದ ಮಹಿಳಾ ಹಾಗೂ ಪುರಷ ವಿಭಾಗದ ಪಂದ್ಯಾಟ ಕಾಲೇಜು ಕ್ರೀಡಾಂಗಣದಲ್ಲಿ ನವೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಬೆಳ್ತಂಗಡಿ ವಿಧಾನ ಸಭಾ ಶಾಸಕ ಹರೀಶ್ ಪೂಂಜಾ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಪಂದ್ಯಾಟದಲ್ಲಿ ಪಾಲ್ಗೊಳ್ಳಬೇಕು. ಸೋಲು ಗೆಲುವು ಲೆಕ್ಕಿಸದೇ ಎರಡನ್ನು ಸಮಾನಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಭಾಗವಹಿಸಿ ಎಂದು ಹೇಳುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆ್ಯಂಟನಿ ಟಿ.ಪಿ ಕಾರ್ಯಕ್ರಮಕ್ಕೆ ಶುಭಕೋರಿದರು. ಈ ವೇಳೆ ವೇದಿಕೆಯಲ್ಲಿ ಮಂಗಳೂರು ವಿ.ವಿ. ಕ್ರೀಡಾಕೂಟದ ವೀಕ್ಷಕರಾದ ಪ್ರೊ. ಪ್ರಕಾಶ್ ಡಿಸೋಜ, ಸಂಚಾಲಕರಾದ ಪ್ರೊ. ರವಿಶಂಕರ್ ಬಿ. ಹಾಗೂ ಕ್ರೀಡಾ ಕಾರ್ಯದರ್ಶಿ ಧಾರ್ಮಿಕ್ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಶೈಲೇಶ್ ಕುಮಾರ್ ನಿರೂಪಿಸಿದರು. ಪ್ರೊ. ಸುರೇಶ್ ಬಿ, ಸ್ವಾಗತಿಸಿ, ಪ್ರೊ. ಗಂಗಾಧರ ವಂದಿಸಿದರು.

ಪ್ರಥಮ ಸ್ಥಾನಗಳಿಸಿದ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು 
ಪಂದ್ಯಾಟದಲ್ಲಿ ಮಹಿಳಾ ಹಾಗೂ ಪುರುಷ ಎರಡು ವಿಭಾಗದಲ್ಲಿಯೂ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳೇ ಪ್ರಥಮ ಸ್ಥಾನಗಳಿಸಿದ್ದು, ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ಸ್ ಆಗಿದ್ದಾರೆ. ವಿಜೇತರಿಗೆ ನಿವೃತ್ತ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಡಿಸಿ ಸದಸ್ಯ ಸಂಜೀವ ರೈ ಬಹುಮಾನ ನೀಡಿ ಶುಭಾ ಹಾರೈಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.