ಕಳಿಯ : ಇಲ್ಲಿಯ ಗೋವಿಂದೂರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಶಾಲೆಗೆ ಸಂಬಂಧಿಸಿದ ಜಾಗದಲ್ಲಿ ಸಾರ್ವಜನಿಕ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಆಕ್ಷೇಪಿಸಿದ ಘಟನೆ ಫೆ. 23 ರಂದು ನಡೆಯಿತು. ವಿಷಯ ತಿಳಿದು ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕಳಿಯ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಕೆ ಜನಾರ್ದನ ಗೌಡ, ಉಪಾಧ್ಯಕ್ಷೆ ಕುಸುಮ ಎನ್ ಬಂಗೇರ, ಪಂಚಾಯತು ಸದಸ್ಯರಾದ ಸುಧಾಕರ ಮಜಲು, ದಿವಾಕರ ಎಮ್, ಯಶೋಧರ ಶೆಟ್ಟಿ ಕೆ, ವಿಜಯ ಕುಮಾರ್ ಕೆ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಭವ್ಯ ರಾಜೇಶ್ ಗೌಡ, ಸದಸ್ಯರು, ಸ್ಥಳೀಯರ ಉಪಸ್ಥಿತರಿದ್ದು ಮಾತುಕತೆ ನಡೆಸಿದರು. ಸರಕಾರಿ ಶಾಲಾ ವಠಾರದಲ್ಲಿ ರಸ್ತೆ ನಿರ್ಮಾಣ ಕಾರ್ಯ ಹತ್ತಿರದ ಸರಕಾರಿ ಜಾಗದಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಶಾಲಾ ಶಿಕ್ಷಕರು, ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಹಾಗೂ ಸದಸ್ಯರು ಒತ್ತಾಯಿಸಿದರು. ಸ್ಥಳೀಯ ಕೆಲವೊಂದು ಜನರು ವಿರೋಧ ವ್ಯಕ್ತಪಡಿಸಿದರು. ಬೆಳ್ತಂಗಡಿ ತಾಲೂಕು ಶಿಕ್ಷಣಾ ಅಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್, ಶಿಕ್ಷಣ ಸಂಯೋಜಕ ಸುಭಾಷ್ ಜಾದವ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸಾವಿತ್ರಿ ಪಿ.ಎನ್, ಸ್ಥಳಕ್ಕೆ ಬಂದು ಶಾಸಕ ರಿಗೆ ಸಮಸ್ಯೆಗಳನ್ನು ವಿವರಿಸಿದರು. ಎರಡು ಕಡೆಯ ಸಮಸ್ಯೆಗಳನ್ನು ಆಲಿಸಿದ ಶಾಸಕರು ಮಾತನಾಡುತ್ತಾ ಈ ಹಿಂದೆ ಇದ್ದ ರಸ್ತೆಯನ್ನು ಮುಂದುವರಿಸುಂತೆ ಗುತ್ತಿಗೆದಾರ ವಸಂತ ಮಜಲು ಅವರಿಗೆ ತಿಳಿಸಿದರು. ಹಾಗೂ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆ ಹರಿಸಿದರು. ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ, ಸ್ಥಳೀಯರಾದ ರಾಜೇಶ್ ಪೆಂರ್ಬುಡ, ವಿಲಿಯಂ ಫೆರ್ನಾಂಡಿಸ್, ದಯರಾಜ್ ಕೆ.ಪಿ, ಅಹಮ್ಮದ್ ಕುಂಇ್, ಹೈದರ್, ದಿನೇಶ್ ಗೋವಿಂದೂರು, ರಾಜೇಶ್ ಗೌಡ, ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಅಜೀಜ್, ಸಹಾಯಕ ಶಿಕ್ಷಕಿ ರೇಶ್ಮಾ,ಉಷಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.