
ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಕೊಕ್ಕಡ, ಇದರ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಎಂ ಹರೀಶ್ ರಾವ್ ಮುಂಡ್ರುಪ್ಪಾಡಿ ಆಯ್ಕೆಯಾಗಿದ್ದಾರೆ.
ಸೌತಡ್ಕ ಗಣೇಶ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಎಂ ಹರೀಶ್ ರಾವ್ ಮುಂಡ್ರುಪ್ಪಾಡಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಈ ವೇಳೆ ಧಾರ್ಮಿಕ ಪರಿಷತ್ ನ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯನಾರಾಯಣ್ ಭಟ್ ಕಶೆಕೋಡಿ ಪಾಲ್ಗೊಂಡು ನೂತನ ಸದಸ್ಯರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಜೊತೆಗೆ ದೇವಸ್ಥಾನ ಅಭಿವೃದ್ಧಿಗೆ ಕಾರ್ಯಗಳಲ್ಲಿ ದೇವಳದ ಪ್ರತಿಯೋರ್ವ ಸದಸ್ಯರು ಏಕಚಿತ್ತ ಕಾರ್ಯನಿರ್ವಹಿಸಬೇಕು. ಹಾಗೇ ಮುಂಬರುವ ದಿನಗಳಲ್ಲಿ ದೇವಳದ ವತಿಯಿಂದ ಅತೀ ಹೆಚ್ಚು ಸತ್ಕಾರ್ಯಗಳು ನಡೆಯುವಂತೆ ನೋಡಿಕೊಳ್ಳಬೇಕೆಂದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಾವೆಡಪ್ಪ ದೊಡಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮ ಚಂದಗಾಣಿಸುವಲ್ಲಿ ಸಹಕರಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಆರ್. ಎಸ್,ಎಸ್ ನ ಹಿರಿಯ ಸದಸ್ಯರಾದ ಕೃಷ್ಣ ಭಟ್ ಹಿತ್ತಿಲು, ದೇವಳದ ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ತೋಡ್ತಿಲ್ಲಾಯ ಪ್ರಶಾಂತ್ ಪಿ.ಪೂವಾಜೆ, ಕೆ ನವೀನ ಕಜೆ ಪಟ್ಟೂರು, ಪುರಂದರ ಕೆ ಕಡೀರ,, ಯಶೋಧ ಶಬರಾಡಿ, ಹೇಮಾವತಿ ಸಂಕೇಶ, ವಿಠಲ ಕೆ. ಕುರ್ಲೆ, ಕೊಕ್ಕಡ, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ, ಆನಂದ ಉಪ್ಪಾರ್ಣ, ಕೊಕ್ಕಡ ಗ್ರಾ.ಪಂ ಉಪಾಧ್ಯಕ್ಷೆ ಪವಿತ್ರ, ಗ್ರಾ.ಪಂ ಸದಸ್ಯರಾದ ಪ್ರಭಾಕರ ಗೌಡ ಮಲ್ಲಿಗೆ ಮಜಲು, ಬೇಬಿ ಶಬರಾಡಿ ಸೇರಿದಂತೆ ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.