ಬೆಳ್ತಂಗಡಿ:- ಭಾರತ ದೇಶದ ಹೂಡಿಕೆದಾರರ ಪ್ರತಿಷ್ಠಿತ ಸಂಸ್ಥೆಯಾದ ಯು.ಟಿ.ಐ ಮ್ಯೂಚುವಲ್ ಫಂಡ್ ನ ಸಲಹಾ ಕೇಂದ್ರ ಇದೀಗ ಬೆಳ್ತಂಗಡಿಯಲ್ಲಿ ಶುಭಾರಂಭಗೊಳ್ಳಲಿದ್ದು, ಬೆಳ್ತಂಗಡಿ , ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯ ಸಲಹಾ ಕೇಂದ್ರವಾಗಿ ಈ ಕಚೇರಿ ಕಾರ್ಯಾಚರಿಸಲಿದೆ.
ಫೆ.25ರಂದು ಬೆಳ್ತಂಗಡಿಯ ಪಿಂಟೋ ಕಾಂಪ್ಲೆಕ್ಸ್ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಲ್ಲಿದ್ದು, ಯು.ಟಿ.ಐ ಮ್ಯೂಚುವಲ್ ಫಂಡ್ನ ಕರ್ನಾಟಕ ಪ್ರಾಂತೀಯ ವಿಭಾಗದ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿರುವ ಕೆ.ವಿ.ರವಿ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಕ್ಷಿಣ ವಿಭಾಗದ ಮುಖ್ಯಸ್ಥರಾದ ದಿವಾಕರ ಎ. ಕಲ್ಯಾಣಪುರ , ಹಾಗೂ ಕರ್ನಾಟಕದ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ .ಕೆ. ರವಿ ಉಪಸ್ಥಿತರಿದ್ದಾರೆ. ಇದೇ ವೇಳೆ ಗ್ರಾಮಾಂತರ ವಿಭಾಗದ ಜನರಿಗೆ ಯು.ಟಿ.ಐ. ಮ್ಯೂಚುವಲ್ ಫಂಡ್ ನ ಅಡಿಯಲ್ಲಿ ಲಭ್ಯವಿರುವ ಸೇವೆ ಹಾಗೂ ಮ್ಯೂಚುವಲ್ ಫಂಡ್ ಉಳಿತಾಯ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಮಾರ್ಗದರ್ಶನವಿರಲಿಲಿ
ಯು.ಟಿ.ಐ. ಮ್ಯೂಚುವಲ್ ಫಂಡ್ ಪ್ರಸ್ತುತ ಸೇವೆಗಳಲ್ಲಿ ಜನಪ್ರಿಯ ವಾಗಿರುವ ಮಾಸಿಕ ಉಳಿತಾಯ ಯೋಜನೆ, ಪಿಂಚಣಿ ಯೋಜನೆ, ಮಕ್ಕಳ ಭವಿಷ್ಯತ್ತಿನ ಯೋಜನೆ ಗಳು ಹಾಗೂ ಮಾರುಕಟ್ಟೆ ಆಧಾರಿತ ಉಳಿತಾಯ ಯೋಜನೆ ಮುಂತಾದವಗಳನ್ನು ಒಳಗೊಂಡಿದೆ.