ವೇಣೂರು: ಇಲ್ಲಿಯ ಮೂಡುಕೋಡಿ ಮೂಡುಕೋಡಿ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸಂಘದ 13 ನಿರ್ದೇಶಕರುಗಳ ಸ್ಥಾನಗಳಿಗೆ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 9 ಮಂದಿ ಗಾಗೂ ಇತರ 4ಮಂದಿ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂಡುಕೋಡಿ ಹಾಲು ಉತ್ಪಾದಕರ ಸಂಘಕ್ಕೆ ಮಾರ್ಚ್ 1ರಂದು ಚುನಾವಣಾ ದಿನಾಂಕ ನಿಗದಿಯಾಗಿದ್ದು, ಸಹಕಾರಿ ಭಾರತಿಯ ಅಧ್ಯಕ್ಷ ಸುಂದರ ಹೆಗ್ಡೆ ನೇತೃತ್ವದಲ್ಲಿ ಸಹಕಾರಿ ಭಾರತಿ ಬೆಂಬಲಿತ 9 ಅಭ್ಯರ್ಥಿಗಳು ಹಾಗೂ ಇತರ 4 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಪ್ರತಿಸ್ಪರ್ಧಿಗಳಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ 13 ಮಂದಿ ಅಭ್ಯರ್ಥಿಗಳೂ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಸುಂದರ ಹೆಗ್ಡೆ, ರಘುರಾಮ ರೈ, ಪ್ರಕಾಶ್ ಭಟ್, ಸದಾನಂದ ಪೂಜಾರಿ, ಕರಿಯ, ಸಂತೋಷ್ ಹೆಗ್ಡೆ, ಯಮುನಾ, ಜೊಯಿಸ್ ರೇಗೋ, ವಿಶಾಲಾಕ್ಷಿ ಹೆಗ್ಡೆ ಹಾಗೂ ಇತರ ಅಭ್ಯರ್ಥಿಗಳಾದ ಶಶಿಧರ ಶೆಟ್ಟಿ, ಉದಯ ಕುಮಾರ್, ತೋಮಸ್ ಆರ್ ನೊರೋನ್ಹ, ವಿಶ್ವನಾಥ ಶೆಟ್ಟಿ ಇವರುಗಳು ಚುನಾವಣಾ ಅಧಿಕಾರಿ ಶ್ರೀಮತಿ ಸುಕನ್ಯಾರವರಿಗೆ ನಾಮಪತ್ರ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ವೇಣೂರು ಗ್ರಾ.ಪಂ. ಸದಸ್ಯರಾದ ಹರೀಶ್ ಪಿ ಎಸ್, ಲಕ್ಷ್ಮಣ ಪೂಜಾರಿ, ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡ ಕಾರ್ಯದರ್ಶಿ ಉಮೇಶ್ ನಡ್ತಿಕಲ್ಲು, ನೀರು ನೈರ್ಮಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ಉಪಸ್ಥಿತರಿದ್ದರು.