ಬೆಳ್ತಂಗಡಿ: ‘‘ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಬಳಕೆಯನ್ನು ತ್ಯಜಿಸಿ, ಸಾವಯವ ಮತ್ತು ದೇಶಿ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯದೊಂದಿಗೆ ಸಮಾಜವೂ ಸದೃಢಗೊಳ್ಳಲು ಸಹಕಾರಿಯಾಗಲಿದೆ’’ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ಹೇಳಿದರು.
ಅವರು ಫೆ.20ರಂದು ಬೆಳ್ತಂಗಡಿ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಧನ್ವಿತ ಓಕೆ ಲೈಫ್ ಕೇರ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿರು. ‘‘ಇಂದು ಪ್ರತಿಯೊಂದು ವಸ್ತುಗಳು ವಿದೇಶಿ ಮೂಲದವದಾಗಿದ್ದು, ಎಲ್ಲರೂ ಗುಣಮಟ್ಟವಿಲ್ಲದ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ನಮ್ಮಲ್ಲಿಯೇ ಗುಣಮಟ್ಟದಿಂದ ಕೂಡಿದ ಉತ್ಪನ್ನಗಳನ್ನು ಯಾರು ಬಳಸುವುದಿಲ್ಲ. ಇದರಿಂದ ದೇಶಕ್ಕೂ ಹಾಗೂ ನಮ್ಮ ಆರೋಗ್ಯಕ್ಕೂ ನಷ್ಟ ಉಂಟಾಗುತ್ತಿದ್ದು, ಇದನ್ನು ತಪ್ಪಿಸಲು ನಮ್ಮಲ್ಲಿಯೇ ಉತ್ಪಾದನೆಯಾಗುವ ವಸ್ತುಗಳನ್ನು ಬಳಕೆ ಮಾಡಬೇಕು. ಇದರಿಂದ ಆರ್ಥಿಕವಾಗಿ ದೇಶ ಸದೃಢಗೊಂಡು ಮುಂದಿನ 3 ವರ್ಷ ಗಳಲ್ಲಿ ಭಾರತ ವಿಶ್ವ ಗುರು ಅಗುದರಲ್ಲಿ ಸಂಶಯ ವಿಲ್ಲ ಎಂದು ಹೇಳಿದರು.
ಉದ್ಯಮಿ ಶ್ರೀ ರಾಮದಾಸ್ ಪೈ ಮಾತನಾಡಿ ಸ್ವದೇಶೀ ಉತ್ಪನ್ನಗಳನ್ನು ಬಳಸುವ ಮೂಲಕ ಉದ್ಯೋಗವಕಾಶವನ್ನು ಸೃಷ್ಟಿಸೋಣ ಹಾಗೂ ದೇಶದ ಆರ್ಥಿಕತೆಯನ್ನು ಬೆಳೆಸೋಣ ಎಂದರು. ಪಿಲ್ಯದ ನಾಟಿ ವೈದ್ಯ ಬೇಬಿ ಪೂಜಾರಿ ಮಾತನಾಡಿ ನಾವು ಕೊಡುವ ನಾಟಿ ಔಷದಿ ಮತ್ತು ಓಕೆ ಲೈಫ್ ಕೇರ್ ನಲ್ಲಿ ಸಿಗುವ ವಸ್ತುಗಳು ಸಮವಾಗಿ ಇದೆ ಎಂದರು.
ಓಕೆ ಕೇರ್ ನ ರಾಷ್ಟ್ರೀಯ ತರಬೇತುದಾರ ಚಂದ್ರಹಾಸ ಶೆಟ್ಟಿ ಮಾತನಾಡಿ ಸಂಸ್ಥೆಯಲ್ಲಿ ಸಿಗುವ ಎಲ್ಲಾ ಉತ್ಪನ್ನ ಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆ ಮಾಲಕರಾದ ಉಮೇಶ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಉಮೇಶ್ ಬಂಗೇರ ಧನ್ಯವಾದ ನೀಡಿದರು. ಸತೀಶ್ ಬಂಗೇರ ಮತ್ತು ಶೈಲಜಾ ಸತೀಶ್ ನಿರೂಪಿಸಿದರು.