ಕಳೆಂಜ: ಇಲ್ಲಿಯ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ.16ರಿಂದ 21ರ ವರೆಗೆ ವಿಜೃಂಭಣೆಯಿಂದ ಜರುಗಿತು.
ಫೆ.21 ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರಿಗೆ 108 ಕಾಯಿ ಗಣಹೋಮ ನಡೆದು, ನಿಡ್ಲೆ ಬೂಡುಜಾಲು ಬೈಲು ಇವರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ನಂತರ ಶ್ರೀ ಸದಾಶಿವ ದೇವರಿಗೆ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಿತು ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದು, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ, ಜ್ಞಾನ ವಿಕಾಸ ತಂಡ, ಊರ ಮಹಿಳೆಯರ ತಂಡ ಕಳೆಂಜ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪಾಲೆಂಜ ಇವರ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಮಹಾಪೂಜೆ ನಡೆದು, ಶ್ರೀ ದೇವರ ಮಹಾಬಲಿ ಹೊರಟು, ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ಕ್ಷೇತ್ರದ ಧರ್ಮ ದೈವಗಳಾದ ವ್ಯಾಘ್ರಚಾಮುಂಡಿ, ಕುಕ್ಕೆತ್ತಾಯ, ಉಳ್ಳಾಲ್ತಿ, ಪಂಜುರ್ಲಿ ಗುಳಿಗ ದೈವಗಳಿಗೆ ನೇಮೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ, ಆಡಳಿತ ಸಮಿತಿ, ನವೀಕರಣ ಸಮಿತಿಯ ಪದಾಧಿಕಾರಿಗಳು, ಊರ-ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.