ಅಳದಂಗಡಿ ಯಲ್ಲಿ ಜೋಶ್ವಾ ಎಂಟರ್ ಪ್ರೈಸಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ : ಇಲ್ಲಿಯ ಸಹಕಾರಿ ಸಂಘ ಕಟ್ಟಡದಲ್ಲಿ ಏಟಿಎಂ ಮತ್ತು ಮೋದಿಕೇರ್ ಉತ್ಪನ್ನಗಳ ಮಳಿಗೆ ಇಂದು ಫೆ. 21ರಂದು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಅಳದಂಗಡಿ ಚರ್ಚ್ ಧರ್ಮಗುರು ವಂ. ಫಾ. ನವೀನ್ ಪಿಂಟೊ ಉದ್ಘಾಟಿಸಿ ಆಶೀರ್ವಚನ ಗೈದರು. ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಪದ್ಮ ಪ್ರಸಾದ್ ಅಜಿಲರು ಶುಭಸಂದೇಶ ನೀಡಿ ಹಾರೈಸಿದರು. ಪಿಲ್ಯ ಜಾಮಿಯಾ ಮಸೀದಿ ಜನಾಬ್ ದಾವೂದ್ ಲತೀಫ್, ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಮ್ಯ ಹರಿಪ್ರಸಾದ್, ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘ ದ ಅಧ್ಯಕ್ಷ ಶಿವ ಭಟ್, ತಾ. ಪ. ಸದಸ್ಯೆ ಶ್ರೀಮತಿ ವಿನೂಷಾ ಪ್ರಕಾಶ್, ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಮೋದಿಕೇರ್ ಸಂಸ್ಥೆಯ ಪ್ರೆಸಿಡೆಂಟಲ್ ಡೈರೆಕ್ಟರ್ ಅರ್ಜುನ್, ಮಾಲಕರ ಪೋಷಕರಾದ ವಿಕ್ಟರ್ ರೊಡ್ರಿಗಸ್, ಶ್ರೀಮತಿ ಮೇರಿ ರೊಡ್ರಿಗಸ್, ಸಹೋದರ ಅರುಣ್ ರೊಡ್ರಿಗಸ್ ಉಪಸ್ಥಿತರಿದ್ದರು. ಪ್ರವೀಣ್ ರೊಡ್ರಿಗಸ್ ಮತ್ತು ಶ್ರೀಮತಿ ಜೂಲಿಯೆಟ್ ರೊಡ್ರಿಗಸ್ ಸರ್ವರ ಸಹಕಾರ ಕೋರಿದರು. ಇಲ್ಲಿ ವಾಕ್ರಂಗೀ ಏಟಿಎಂ ಸರ್ವಿಸ್, ಮತ್ತು ಮೋದಿಕೇರ್ ಉತ್ಪನ್ನಗಳು ಲಭ್ಯವಿದೆ ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.