ಉಜಿರೆ : ಇಲ್ಲಿಯ ವಿಶ್ವಾಸ್ ಸಿಟಿ ಸೆಂಟರ್ ನಲ್ಲಿ ಆರ್. ಸಿ. ಎಂ. ಸ್ವದೇಶಿ ಉತ್ಪನ್ನ ಮಳಿಗೆ ಯನ್ನು ಹೆರಾಲ್ಡ್ ಸೆರಾ ಉದ್ಘಾಟಿಸಿದರು. ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ಗಳಾದ ವಂ. ಫಾ. ದೀಪ ಬೆಳಗಿಸಿ ಆಶೀರ್ವಚನ ಗೈದರು.
ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಉದಯ್ ಜೋಸೆಫ್ ಫೆರ್ನಾಂಡಿಸ್ ಶುಭ ಸಂದೇಶ ನೀಡಿದರು. ಉಜಿರೆ ಸಂತ ಅಂತೋನಿ ಚರ್ಚ್ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಮಾಜಿ ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಆರ್. ಸಿ. ಎಂ. ಕಂಪನಿಯ ಅಮೃತ್ ಜೋಶಿ, ಜಯರಾಮ ಕೊಟ್ಟಾರ, ಕಿಮ್ರಮ್ ಮೊದಲಾದವರು ಉಪಸ್ಥರಿದ್ದರು. ಅಮೃತ್ ಜೋಶಿ ಕಂಪನಿ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಮೈಮುನಾ, ವಲೇರಿಯನ್ ಡಿಸೋಜಾ ತಾವು ಉಪಯೋಗಿಸಿದ ಪ್ರಾಡಕ್ಟ್ ಬಗ್ಗೆ ತಿಳಿಸಿದರು. ಮಾಲಕರಾದ ಆಂಟೋನಿ ಡಿಸೋಜ, ಹೆಲೆನ್ ಡಿಸೋಜಾ, ಸರ್ವರ ಸಹಕಾರ ಕೋರಿ ವಂದಿಸಿದರು. ಹೆರಾಲ್ಡ್ ಪಿಂಟೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.