ಬೆಳ್ತಂಗಡಿ: ಇಲ್ಲಿಯ ಹಳೆಕೋಟೆ ಚಾಮುಂಡೇಶ್ವರಿ ವಾಣಿಜ್ಯ ಸಂಕೀರ್ಣದಲ್ಲಿ ಕನ್ಯಾಡಿ-| ಕಡ್ತಿಯಾರ್ ಕಂಟ್ರಾಕ್ಟ್ದಾರರಾದ ಕೆ. ತಿಮ್ಮಪ್ಪ ಗೌಡ ಹಾಗೂ ಇವರ ಮಕ್ಕಳ ಮಾಲಕತ್ವದ `ಮಹನಿಸ್ ಮಾರ್ಟ್’ ಸುಪರ್ ಮಾರ್ಕೆಟ್ ಇಂದು(ಫೆ.20) ಶುಭಾರಂಭಗೊಂಡಿತು
ನೂತನ ಸಂಸ್ಥೆಯನ್ನು ಇಂದಬೆಟ್ಟು ಪುರೋಹಿತರಾದ ವೇ.ಮೂ. ಅನಂತರಾಮ್ ಉಪಾಧ್ಯಾಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಬಿ. ನಿರಂಜನ್ ಬಾವಂತಬೆಟ್ಟು, ಬೆಳ್ತಂಗಡಿ ಹೋಲಿ ರೆಡೀಮರ್ ಆ.ಮಾ. ಶಾಲಾ ಪ್ರಾಂಶುಪಾಲರಾದ ಫಾ. ಜೈಸನ್ ವಿಜಯ್ ಮೋನಿಸ್, ವಾಣಿ ಸೌಹಾರ್ದ ಕೋ ಆ. ಬ್ಯಾಂಕ್ನ ಅಧ್ಯಕ್ಷರಾದ ಎಚ್. ಪದ್ಮ ಗೌಡ, ವಾಣಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ, ಚಾಮುಂಡೇಶ್ವರಿ ವಾಣಿಜ್ಯ ಸಂಕೀರ್ಣದ ಮಾಲಕರಾದ ಸುಧೀರ್ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಸಕರಾದ ಹರೀಶ್ ಪೂಂಜ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡ ಟಿ. ಕಾರ್ಯಕ್ರಮಕ್ಕೆ ಮುಂಚಿತವಾಗಿ ಆಗಮಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಮಹನಿಸ್ ಮಾರ್ಟ್ನ ಮಾಲಕರಾದ ಕೆ. ತಿಮ್ಮಪ್ಪ ಗೌಡ ಕಡ್ತಿಯಾರ್ ಹಾಗೂ ಬೆಳ್ತಂಗಡಿ ಶ್ರೀ ಮಹಾಗಣಪತಿ ಕನ್ಸಲ್ಟೆನ್ಸಿಯ ಇಂಜಿನಿಯರ್ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ಬಂದಂತಹ ಅತಿಥಿ ಗಣ್ಯರನ್ನು ಮಾಲಕರಾದ ಹರ್ಷೇಂದ್ರ ಕುಮಾರ್ ಹಾಗೂ ಶ್ರೀಮತಿ ವಿದ್ಯಾಶ್ರೀ, ಶ್ರೀಮತಿ ಭಾರತಿ ತಿಮ್ಮಪ್ಪ ಗೌಡ, ಪ್ರಸಾದ್ ಹಾಗೂ ಶ್ರೀಮತಿ ಕೃತಿಕಾ ಕಡ್ತಿಯಾರ್, ಶ್ರೀಮತಿ ಮಮತಾ ಮತ್ತು ಪುರಂದರ ಗೌಡ ಕರ್ನಂತ್ತೋಡಿ ಸ್ವಾಗತಿಸಿ, ಸತ್ಕರಿಸಿದರು.
ಶ್ರೀಮತಿ ವಿದ್ಯಾಶ್ರೀ ಸ್ವಾಗತಿಸಿ, ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಕೃತಿಕಾ ಪ್ರಸಾದ್ ಧನ್ಯವಾದವಿತ್ತರು.
ಈ ಮಾರ್ಟ್ನಲ್ಲಿ ವಿಶಾಲವಾದ ಪಾರ್ಕಿಂಗ್ ಇದ್ದು ಒಂದೇ ಸೂರಿನಡಿ ದಿನಬಳಕೆಯ ವಸ್ತುಗಳು ಸೇರಿದಂತೆ ನೂರಾರು ಸಾಮಾಗ್ರಿಗಳು ಲಭ್ಯವಿದೆ. ಹೋಮ್ ಡೆಲಿವರಿ ಸಹ ಲಭ್ಯವಿದೆ ಎಂದು ಮಾಲಕರು ಈ ಸಂದರ್ಭ ತಿಳಿಸಿದರು.