ಸಾಂಸ್ಕೃತಿಕ ಕಲಾವೈಭವ
ಬೆಳ್ತಂಗಡಿ: ಇಲ್ಲಿಯ ಕುತ್ಯಾರು ಶ್ರೀ ಸೊಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾ ರಥೋತ್ಸವದ ಪ್ರಯುಕ್ತ ಫೆ.19 ರಂದು ಬೆಳ್ತಂಗಡಿಯ ನವಶಕ್ತಿ ಫ್ರೆಂಡ್ಸ್ ವತಿಯಿಂದ ಸಾಧಕರಿಗೆ ಹಾಗೂ ವೀರಯೋಧರಿಗೆ ಗೌರವವಂದನಾ ಸಾಂಸ್ಕೃತಿಕ ಕಾರ್ಯಕ್ರಮ ಸಂತೆಕಟ್ಟೆ ಅಯ್ಯಪ್ಪ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ನವಶಕ್ತಿ ಫ್ರೆಂಡ್ಸ್ ಪ್ರಾಯೋಜಕರಾದ ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ ಟಿ, ಲಾಯಿಲ ಕ್ಷೇತ್ರದ ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ್ ಗೌಡ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಖರ ವಾಗ್ಮಿ ಅಕ್ಷತಾ ಗೋಖಲೆಯವರು ಉಪಸ್ಥಿತರಿದ್ದು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ಪುರಸ್ಕೃತರಾದ ಬೆಳ್ತಂಗಡಿ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೆಬಲ್ ವೆಂಕಟೇಶ ನಾಯ್ಕ್, ವೀರ ಯೋಧರಾದ ಯತೀಂದ್ರ, ಮೇಘಶ್ಯಾಮ, ಸುಧಾಕರ ಗೌಡ, ಸುನೀಲ್ ರಾಜ್, ಹಾಗೂ ಝೀ ಕನ್ನಡ ವಾಹಿನಿಯ ಡಿಕೆಡಿ ರಿಯಾಲಿಟಿ ಶೋ ಸ್ಪರ್ಧಾಳು ಕು| ಪ್ರತೀಕ್ಷಾ ಇವರುಗಳನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖ ಸನ್ಮಾನಿಸಿ ಗೌರವಿಸಲಾಯಿತು.
ಗುರಿಪಳ್ಳ ಗುರು ರಾಘವೇಂದ್ರ ಭಜನಾ ತಂಡದಿಂದ ಕುಣಿತ ಭಜನೆ, ಧರ್ಮಶಾಸ್ತ್ರ ಚೆಂಡೆ ಬಳಗದಿಂದ ಚೆಂಡೆ ಬಡಿತ, ಪ್ರಕಾಶ್ ಮಹಾದೇವನ್ ರವರ ಮಂಗಳೂರಿನ ಅಟ್ರ್ಯಾಕ್ಟಿವ್ ಮೆಲೋಡಿಸ್ ವತಿಯಿಂದ ಸಾಂಸ್ಕೃತಿಕ ಕಲಾ ವೈಭವ ಜರುಗಿತು.
ಪ್ರಕಾಶ್ ಸ್ವಾಗತಿಸಿ, ನವ್ಯ ಕಾರ್ಯಕ್ರಮ ನಿರೂಪಿಸಿ, ಅರವಿಂದ ಕುಮಾರ್ ಧನ್ಯವಾದವಿತ್ತರು.