ಕಳಿಯ : ಇಲ್ಲಿಯ ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ 7 ತಿಂಗಳ ಮಗುವಿಗೆ ಅನ್ನ ಪ್ರಶಾನ್ನ ಕಾರ್ಯಕ್ರಮ ಫೆ.19 ರಂದು ಜರುಗಿತು.
ಸ್ಥಳೀಯ ಕಲ್ಲುಗುಡ್ಡೆ ನಿವಾಸಿ ನೇಬಿಸತ್ ಉಲ್ ಮಿಸ್ರಿಯಾ ಅವರ 7 ತಿಂಗಳ ಮಗು ಅಮ್ನಫಾತಿಮ ಳಿಗೆ ಅನ್ನ ಪ್ರಶಾನ್ನವನ್ನು ಕಳಿಯ ಪಂಚಾಯತು ಅಧ್ಯಕ್ಷೆ ಹಾಗೂ ಆಶಾ ಕಾರ್ಯಕರ್ತೆ ಸುಭಾಷಿಣಿ ಕೆ ಜನಾರ್ದನ ಗೌಡ ಮಗುವಿನ ಬಾಯಿಗೆ ನೀಡಿದರು. ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸ ಬೇಕು.
6 ತಿಂಗಳ ನಂತರ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವುದರಿಂದ ಉತ್ತಮ ಆರೋಗ್ಯಕರ ಬೆಳವಣಿಗೆ ಹೊಂದುತ್ತವೆ ಎಂದು ಹೇಳಿದರು.
ಕಳಿಯ ಪಂಚಾಯತು ಸದಸ್ಯೆ ಶ್ವೇತಾ ಶ್ರೀನಿವಾಸ್ ಮಗುವಿಗೆ ಶುದ್ಧ ಆಹಾರವನ್ನು ಸಂಗ್ರಹಿಸಲು ಸ್ಟೀಲ್ ಬುತ್ತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಷಣಾ ಅಭಿಯಾನ ವತಿಯಿಂದ ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ವಾರಿಜ,ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್.ಸ್ವಾಗತಿಸಿ, ಧನ್ಯವಾದವಿತ್ತರು.