ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಗೇರುಕಟ್ಟೆ ಜನರಲ್ ಸ್ಟೋರ್ ಮಾಲೀಕರಾದ ಪುಂಡಲೀಕ ಪೈ ಧರ್ಮಪತ್ನಿ ಶ್ರೀಮತಿ ಜಿ.ಪೈ (78 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಫೆ.16 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರ ಪತಿ ಮತ್ತು ಮೂವರು ಪುತ್ರರು, ಮೂವರು ಪುತ್ರಿಯರು, ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಗಣ್ಯರು, ಹಿತೈಷಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.