ವೇಣೂರಿನ ಕತ್ತೋಡಿಬೈಲು ಯುವತಿ ಆತ್ಮಹತ್ಯೆಗೆ ಶರಣು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಇಲ್ಲಿಯ ಕತ್ತೋಡಿಬೈಲು ನಿವಾಸಿ ವಿಠಲ ಆಚಾರ್ಯ ಅವರ ಪುತ್ರಿ ಕು| ಸೌಮ್ಯಾ (19) ಅವರು ಮನೆಯ ಪಕ್ಕಾಸಿಗೆ ಚೂಡಿದಾರ ಸಾಲು ಬಿಗಿದು ಇಂದು ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳ್ತಂಗಡಿ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿರುವ ಈಕೆ ಲಾಕ್‌ಡೌನ್ ಬಳಿಕ ತರಗತಿಗೆ ತೆರಳದೆ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಬೆಳಿಗ್ಗೆ ಎದ್ದು ಉಪಹಾರ ಸೇವಿಸಿದ್ದ ಸೌಮ್ಯ ಬಳಿಕ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮನೆಯ ಮೇಲ್ಛಾವಣಿಯನ್ನು ಗಮನಿಸಿದಾಗ ಚೂಡಿದಾರದ ಶಾಲುವಿನಲ್ಲಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೇಣೂರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.