ಆರೋಪಿ ಸಮದ್ ಬಂಧನ: ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ಉರುವಾಲು: ಉರುವಾಲು ಗ್ರಾಮದ ಕುಪ್ಪೆಟ್ಟಿಯ ನೆಕ್ಕಿಲ್ ಎಂಬಲ್ಲಿಯ ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆ ಬೆಳೆಸಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಾಲಕಿಯ ಮನೆಯವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಸಮದ್ ನೆಕ್ಕಿಲ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಉರುವಾಲು ಗ್ರಾಮದ ಕುಪ್ಪೆಟ್ಟಿಯ ನೆಕ್ಕಿಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಬಾಲಕಿಯು ತನ್ನ ತಾಯಿ, ಅಜ್ಜಿ, ತಮ್ಮನ ಜೊತೆ ವಾಸ್ತವ್ಯವಿದ್ದು, ಸುಮಾರು 3 ತಿಂಗಳ ಹಿಂದೆ ಬಾಡಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಆರೋಪಿ ನೆಕ್ಕಿಲ್ ನಿವಾಸಿ ಸಮದ್ ಎಂಬವರು ಮನೆಯ ರಿಫೇರಿ ಕೆಲಸವನ್ನು ನಿರ್ವಹಿಸಿದ್ದರು. ಬಳಿಕ ಆರೋಪಿ ಬಾಲಕಿಯ ಮನೆಗೆ ಅಪರೂಪಕ್ಕೊಮ್ಮೆ ಹೋಗಿ ಬಂದು ಸಂಪರ್ಕವನ್ನಿಟ್ಟುಕೊಂಡಿದ್ದನು ಎನ್ನಲಾಗಿದೆ.
ಡಿಸೆಂಬರ್ ತಿಂಗಳ ಮೊದಲ ವಾರದ ಒಂದು ದಿನ ರಾತ್ರಿ ಹೊತ್ತು ಬಾಲಕಿಯ ಮನೆಗೆ ಬಂದು ಆಕೆಯ ತಾಯಿಯನ್ನು ಒಂದು ರೂಮ್ನಲ್ಲಿ ಕೂಡಿ ಹಾಕಿ, ಬಾಲಕಿಯೊದಿಗೆ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಬಾಲಕಿಯ ಮನೆಯವರು ಫೆ. 17 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸರು ಆರೋಪಿ ಸಮದ್ ಎಂಬಾತನ್ನು ಬಂಧಿಸಿ ವಿಚಾರಣೆ ನಡಿಸಿದ್ದು, ಅ.ಕ್ರ 07/2021 ಕಲಂ: 376, ಐ.ಪಿ.ಸಿ. ಮತ್ತು ಕಲಂ; 4, 6 ಪೋಕ್ಸೋ ಕಾಯ್ದೆ 2012ಯಡಿ ಪರಕರಣ ದಾಖಲಿಸಿಕೊಂಡಿದ್ದಾರೆ.