ಕಡಿರುದ್ಯಾವರ: ಮನೆಯಲ್ಲಿ ವಿದ್ಯುತ್ ಕೆಲಸ ನಿರ್ವಹಿಸುತ್ತಿರುವ ಸಂದರ್ಭ ಆಕಸ್ಮಿಕವಾಗಿ ಶಾಕ್ ತಗುಲಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಫೆ.18 ಸಂಜೆ ಕಡಿರುದ್ಯಾವರ ಗ್ರಾಮದ ಕಾನರ್ಪ ಕೌಡಂಗೆಯಲ್ಲಿ ನಡೆದಿದೆ.
ಕಾನರ್ಪ ಕೌಡಂಗೆ ನಿವಾಸಿ ಚನನ ಗೌಡ ರವರ ಪುತ್ರ ಅವಿನಾಶ್ ವಿದ್ಯುತ್ ತಗುಲಿ ಮೃತಪಟ್ಟ ದುರ್ದೈವಿ. ಅವಿನಾಶ್ ರವರು ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದು ಜೊತೆಗೆ ವಿದ್ಯುತ್ ಸಂಬಂಧಿತ ಕೆಲಸ ಕಾರ್ಯಗಳನ್ನೂ ಮಾಡುತ್ತಿದ್ದರು. ಫೆ.18ರಂದು ಮನೆಯಲ್ಲಿ ಎಲೆಕ್ಟ್ರೀಷಿಯನ್ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ್ದು, ಗಂಭೀರಗೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಅವಿನಾಶ್ ರವರು ಚಿರಂಜೀವಿ ಯುವಕ ಮಂಡಲದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ತಂದೆ ಚನನ ಗೌಡ, ತಾಯಿ ದೇವಕಿ, ಸಹೋದರ ಅಭಿಲಾಷ್, ಸಹೋದರಿಯರಾದ ಅಶ್ವಿನಿ, ಅಕ್ಷತಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ