ಉಭಯ ಜಿಲ್ಲೆಯಲ್ಲಿ ಜನರು ನಿತ್ಯ ಉಪಯೋಗಿಸುವ ಕುಚ್ಚಲಕ್ಕಿಯನ್ನು ಪಡಿತರದಾರರಿಗೆ ನೀಡುವಂತೆ ಹಾಗೂ ಪೈಲೆಟ್ ಯೋಜನೆ ಜಾರಿಗೊಳಿಸುವಂತೆ ಸಿ.ಎಂಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಬೆಳ್ತಂಗಡಿ: ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪಡಿತರ ಅಂಗಡಿಗಳಲ್ಲಿ ದೊರೆಯುತ್ತಿರುವ ಅಕ್ಕಿ ಕಳಪೆಯಾಗಿದ್ದು, ಇಲ್ಲಿನ ಜನ ಸಾಮಾನ್ಯರು ನಿತ್ಯ ಉಪಯೋಗಿಸುವ ಕುಚ್ಚಲಕ್ಕಿಯನ್ನು ಪಡಿತರದಾರರಿಗೆ ವಿತರಿಸಬೇಕು ಹಾಗೂ ದ.ಕ ಜಿಲ್ಲೆಯಲ್ಲೂ ಪೈಲೆಟ್ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ದ.ಕ.ಜಿಲ್ಲಾ ಸಚಿವರು ಹಾಗೂ ಶಾಸಕರುಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ಮನವಿ ನೀಡಿದರು.
ಕಳಪೆ ಗುಣಮಟ್ಟವನ್ನು ಹೊಂದಿರುವ ಅಕ್ಕಿಯನ್ನು ಜನ ಸಾಮಾನ್ಯರು ಉಪಯೋಗಿಸಲಾರದೆ ಆ ಅಕ್ಕಿಯನ್ನು ಅಂಗಡಿಗೆ ಮಾರಾಟ ಮಾಡಿ ಅಧಿಕ ದರದ ಕುಚ್ಚಲಕ್ಕಿಯನ್ನು ಪಡೆಯುತ್ತಿದ್ದು, ಪಡಿತರದ ಮೂಲಕ ದೊರೆತ ಅಕ್ಕಿಯನ್ನು ಮಾರಾಟ ಮಾಡಿದ ಕಾರಣದಿಂದಾಗಿ ಕೇಸುಗಳು ದಾಖಲಾಗುತ್ತಿದೆ. ಅಲ್ಲದೆ ದ.ಕ ಮತ್ತು ಉಡುಪಿ ಜಿಲ್ಲೆಯಾದ್ಯಂತ ಹಲವರು ನಿತ್ಯ ಬಳಕೆಗೆ ಕುಚ್ಚಲಕ್ಕಿಯನ್ನೇ ಉಪಯೋಗಿಸುತ್ತಿದ್ದು, ಕಳಪೆ ಗುಣಮಟ್ಟ ಹೊಂದಿರುವ ಪಡಿತರ ಅಕ್ಕಿಯನ್ನು ಪಡೆಯದೆ ಹಾಗೇಯೇ ವ್ಯರ್ಥಮಾಡುತ್ತಿದ್ದಾರೆ
ಆದುದರಿಂದ ದ.ಕ ಮತ್ತು ಉಡುಪಿ ಜಿಲ್ಲೆಯ ಜನಸಾಮಾನ್ಯರು ಹೆಚ್ಚಾಗಿ ಉಪಯೋಗಿಸುವ ಕುಚ್ಚಲಕ್ಕಿಯನ್ನೇ ಪಡಿತರವಾಗಿ ನೀಡಬೇಕು. ಇಲ್ಲವೇ ಪಡಿತರ ಅಂಗಡಿಗಳಲ್ಲಿ ನೀಡಲಾಗುವ ಅಕ್ಕಿಯ ಬದಲಾಗಿ ಆ ಅಕ್ಕಿಯ ಮೌಲ್ಯವನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮೆ ಮಾಡಿ, ಆ ಮೊತ್ತದಿಂದ ಅವರಿಗೆ ಯೋಗ್ಯವಾದ ಅಕ್ಕಿಯನ್ನು ಖರೀದಿಸಲು ಅನುವಾಗುವಂತೆ ಜಿಲ್ಲೆಯಾದ್ಯಂತ ಪೈಲೆಟ್ ಯೋಜನೆಯನ್ನು ಜಾರಿಗೊಳಿಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ದ.ಕ ಜಿಲ್ಲಾ ಶಾಸಕರುಗಳಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಕಿಯೋನಿಕ್ಸ್ ಅಧ್ಯಕ್ಷ ಹರಿಕರಷ್ಣ ಬಂಟ್ವಾಳ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.