ಕಳೆಂಜ: ಇಲ್ಲಿಯ ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇದರ ಬ್ರಹ್ಮಕಲಶೋತ್ಸವವು ಫೆ.16ರಿಂದ 21ರ ವರೆಗೆ ಜರುಗಲಿದ್ದು, ಆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆಯಾಗಿ ನೀಡಿದ ರೂ.50ಸಾವಿರದ ಚೆಕ್ಕನ್ನು ಶ್ರೀ ಧ.ಮಂ.ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರ ಮುಖಾಂತರ ದೇವಸ್ಥಾನದ ಸಮಿತಿಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ, ಆಡಳಿತ ಸಮಿತಿ, ನವೀಕರಣ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.