ದೇಶದ 3 ರಾಜ್ಯಗಳಲ್ಲಿ 100 ರೂ. ಗಡಿ ದಾಟಿದ ತೈಲ ಬೆಲೆ: ರಾಜ್ಯದಲ್ಲಿ ಎಷ್ಟಿದೆ ಗೊತ್ತಾ…?

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಾಗಾಲೋಟದಲ್ಲಿ ಮೇಲೇರುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ತಕ್ಷಣಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕೇವಲ 10 ದಿನದಲ್ಲಿ 8 ಬಾರಿ ತೈಲ ದರ ಏರಿಕೆಯಾಗಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಲೇ ಇದೆ.

ದೇಶದ ಕೆಲ ರಾಜ್ಯಗಳಲ್ಲಿ  ಪೆಟ್ರೋಲ್​ ಬೆಲೆ 100 ರೂ. ಗಡಿ ದಾಟಿ ಮುನ್ನುಗುತ್ತಿದ್ದು, ರಾಜಸ್ಥಾನದಲ್ಲಿ ಮೊದಲ ಬಾರಿಗೆ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100 ರೂ. ಗಡಿ ದಾಟಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳದ್ದು ಇದೇ ಪಜೀತಿಯಾಗಿದ್ದು,  ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ.

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ಲೀಟರ್​​ಗೆ 89.54 ಹಾಗೂ ಡಿಸೇಲ್​ ಬೆಲೆ 79.95 ಪೈಸೆ ಇದ್ದು, ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪೆಟ್ರೋಲ್​ 92.48 ರೂ. ಡಿಸೇಲ್​ 84.72 ರೂ. ಗಳಷ್ಟಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.