ಬೆಳ್ತಂಗಡಿ: ಏಪ್ರಿಲ್ ಎರಡನೇ ವಾರದಲ್ಲಿ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 14 ನೇ ಸೀಸನ್ ಟೂರ್ನಿಗಾಗಿ ಇಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, 8 ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿವೆ.
ಮಿನಿ ಹರಾಜು
ಈ ಬಾರಿ ಮಿನಿ ಹರಾಜು ನಡೆಯಲ್ಲಿದ್ದು, ಬಿಡ್ಡಿಂಗ್ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಲಿದೆ. ಮಧ್ಯಾಹ್ನ 3ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಐದರಿಂದ ಆರು ಗಂಟೆಗಳ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಬಿಡ್ಡಿಂಗ್ ಕಾರ್ಯಕ್ರಮ ನೇರ ಪ್ರಸಾರವಾಗಲಿದ್ದು, 61 ಆಟಗಾರರನ್ನ ತಂಡಗಳು ಖರೀದಿಸುವ ಅವಕಾಶ ಇದೆ.
ಹರಾಜಿನ ಪಟ್ಟಿಯಲ್ಲಿ 290ಕ್ಕೂ ಹೆಚ್ಚು ಆಟಗಾರರು
ಇನ್ನು ಹರಾಜಿನ ಪಟ್ಟಿಯಲ್ಲಿ 290ಕ್ಕೂ ಹೆಚ್ಚು ಆಟಗಾರರಿದ್ದು, ಸದ್ಯ ಇರುವ ಐಪಿಎಲ್ ತಂಡಗಳ ಪೈಕಿ ಅತಿ ಹೆಚ್ಚು ಬಜೆಟ್ ಹೊಂದಿರುವುದು ಪಂಜಾಬ್ ಕಿಂಗ್ಸ್ ತಂಡ. ಈ ತಂಡ 9 ಆಟಗಾರರ ಖರೀದಿಗೆ 53 ಕೋಟಿ ರೂ ವ್ಯಯಿಸಲು ಸಿದ್ಧವಾಗಿದ್ದು, ಪಂಜಾಬಿ ರಾಜರು ದೊಡ್ಡ ಆಟಗಾರರ ಮೇಲೆ ಭಾರೀ ಮೊತ್ತ ಬಿಡ್ ಮಾಡುವ ನಿರೀಕ್ಷೆ ಇದೆ.
ಇನ್ನು ಆರ್ಸಿಬಿ ತಂಡದ ಖಜಾನೆಯಲ್ಲಿ 35.9 ಕೋಟಿ ರೂ ಬಾಕಿ ಇದ್ದು, 11 ಆಟಗಾರರನ್ನ ಖರೀದಿಸಬಹುದು. ರಾಜಸ್ಥಾನ್ ರಾಯಲ್ಸ್ ತಂಡದ ಬಳಿಯೂ 30 ಕೋಟಿಗಿಂತ ಹೆಚ್ಚು ಹಣ ಇದೆ.
ಕಣದಲ್ಲಿ 10 ದೇಶಗಳ ಆಟಗಾರರು
ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಆಲ್ರೌಂಡರ್ ಕೇದಾರ್ ಜಾಧವ್, ನಂ.1 ಟಿ-20 ಬ್ಯಾಟ್ಸ್ಮನ್ ಡೇವಿಡ್ ಮಲನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿ ಒಟ್ಟು 292 ಆಟಗಾರರು ಈ ಬಾರಿಯ ಹರಾಜು ಪಟ್ಟಿಯಲ್ಲಿದ್ದು,. 164 ಭಾರತೀಯರು, 128 ವಿದೇಶದವರು ಸೇರಿ 10 ದೇಶಗಳ ಆಟಗಾರರು ಕಣದಲ್ಲಿದ್ದಾರೆ.
ಫ್ರಾಂಚೈಸಿಗಳ ಹಣ ಬಲ ಹಾಗೂ ಖರೀಸಿಬಹುದಾದ ಆಟಗಾರರ ಸಂಖ್ಯೆ:
- ಬೆಂಗಳೂರು ಬಳಿ 35.40 ಕೋಟಿ ರೂ. ಮೊತ್ತ ಇದ್ದು, 11 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.
- ಚೆನ್ನೈ ಬಳಿ 19.90 ಕೋಟಿ ರೂ. ಮೊತ್ತ ಇದ್ದು, 6 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.
- ಡೆಲ್ಲಿ: 13.40 ಕೋಟಿ ರೂ. ಮೊತ್ತ ಇದ್ದು, 8 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.
- ಪಂಜಾಬ್: 53.20 ಕೋಟಿ ರೂ. ಮೊತ್ತ ಇದ್ದು, 9 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.
- ಕೋಲ್ಕತ್ತಾ: 10.75 ಕೋಟಿ ರೂ. ಮೊತ್ತ ಇದ್ದು, 8 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.
- ಮುಂಬೈ:15.35 ಕೋಟಿ ರೂ. ಮೊತ್ತ ಇದ್ದು, 7 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.
- ರಾಜಸ್ಥಾನ: 37.65 ಕೋಟಿ ರೂ. ಮೊತ್ತ ಇದ್ದು, 9 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.
- ಹೈದರಾಬಾದ್: 10.75 ಕೋಟಿ ರೂ. ಮೊತ್ತ ಇದ್ದು, 3 ಆಟಗಾರರನ್ನು ಸಾಮರ್ಥವನ್ನು ಹೊಂದಿದೆ.