ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಕೊಕ್ಕಡ ಇದರ ನೂತನ ವ್ಯವಸ್ಥಾಪನಾ ಸಮಿತಿಗೆ ಧಾರ್ಮಿಕ ದತ್ತಿ ಇಲಾಖೆ ಸದಸ್ಯರನ್ನು ಆಯ್ಕೆಗೊಳಿಸಿ ಆದೇಶ ನೀಡಿದೆ.
ಸಮಿತಿಯ ನೂತನ ಸದಸ್ಯರಾಗಿ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ತೋಡ್ತಿಲ್ಲಾಯ ಹೆಚ್, ಸಾಮಾನ್ಯ ಕ್ಷೇತ್ರದಿಂದ ಎಂ. ಹರೀಶ್ ರಾವ್ ಮುಂಡ್ರುಪ್ಪಾಡಿ, ತುಕ್ರಪ್ಪ ಶೆಟ್ಟಿ ನೂಜೆ ಮನೆ ಕೌಕ್ರಾಡಿ, ಪ್ರಶಾಂತ್ ಪಿ ಪೂವಾಜೆ, ಕೆ. ನವೀನ್ ಕಜೆ ಪಟ್ಟೂರು, ಪುರಂದರ ಕೆ ಕಡೀರ ಕೊಕ್ಕಡ, ಮಹಿಳಾ ಕ್ಷೇತ್ರದಿಂದ ಶ್ರೀಮತಿ ಯಶೋಧ ಶಬರಾಡಿ, ಶ್ರೀಮತಿ ಹೇಮಾವತಿ ಸಂಕೇಶ, ಪ.ಜಾ/ಪ.ಪಂಗಡದಿಂದ ವಿಠಲ ಕೆ ಕುರ್ಲೆ ಮನೆ ಕೊಕ್ಕಡ ಆಯ್ಕೆಯಾಗಿದ್ದಾರೆ.