ಮಡಂತ್ಯಾರು: ಪಾರೆಂಕಿ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ಆಯ್ಕೆಗೊಳಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ನೂತನ ಸದಸ್ಯರಾಗಿ ಪ್ರಧಾನ ಅರ್ಚಕ ಶ್ರೀಧರ್ ರಾವ್, ಸಾಮಾನ್ಯ ಕ್ಷೇತ್ರದಿಂದ ರತ್ನಾಕರ ಶೆಟ್ಟಿ ಮೂಡಾಯೂರು, ಎಂ ವಿಠಲ ಶೆಟ್ಟಿ ಮೂಡಾಯೂರು, ಡಾ| ಸುಬ್ರಹ್ಮಣ್ಯ ಬಲ್ಲಾಳ್ ಪಾರೆಂಕಿ, ಪುಷ್ಪರಾಜ ಗೌಡ ಪಾರೆಂಕಿ, ಸುಂದರ ಪೂಜಾರಿ ಪಾರೆಂಕಿ, ಮಹಿಳಾ ಕ್ಷೇತ್ರದಿಂದ ಶ್ರೀಮತಿ ವೇದಾವತಿ ಪಾರೆಂಕಿ, ಶ್ರೀಮತಿ ಬೇಬಿ ಪಾರೆಂಕಿ, ಪ.ಜಾ/ಪ.ಪಂಗಡದಿಂದ ಗುರುರಾಜ್ ಹಚ್ಚಬೆ ಆಯ್ಕೆಯಾಗಿರುತ್ತಾರೆ.