ಕಣಿಯೂರು: ಕಣಿಯೂರಿನ ಪಿಲಿಗೂಡು ಆಯುಷ್ ಆಯುರ್ವೇದ ಆಸ್ಪತ್ರೆ ಇದರ ಆಶ್ರಯದಲ್ಲಿ ಉಚಿತ ಯೋಗ ಹಾಗೂ ಪ್ರಾಣಾಯಾಮ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಇಂದು(ಫೆ.17) ನಡೆಯಿತು.
ಪೇರಿಯಡ್ಕ ಎಂ ಎಸ್ ಸಿ ಇನ್ ಯೋಗ ಕೇಂದ್ರದ ಯೋಗ ಗುರುಗಳಾದ ಸಂತೋಷ್ ಇವರು ಶಿಬಿರವನ್ನು ಉದ್ಘಾಟಿಸಿದರು. ಪಿಲಿಗೂಡಿನ ವೈದ್ಯ ಹಾಗೂ ಅರಣ್ಯಾಧಿಕಾರಿ ಭರತ್, ಗ್ರಾ.ಪ. ಸದಸ್ಯ ಯಶೋಧರ ಶೆಟ್ಟಿ, ನಾರಾಯಣ ಗೌಡ ಮುಚ್ಹೂರು, ವಿಠ್ಠಲ ಶೆಟ್ಟಿ ಕೊಲ್ಲೋಟ್ಟು ಪ್ರದೀಪ್ ಆಳ್ವ ನೋಂಡೆಲು, ಪ್ರಭಾಕರ ಶೆಟ್ಟಿ ಅತ್ತಿಲ, ನಾರಾಯಣ ಶೆಟ್ಟಿ, ಚೇತನ ನಾರಾಯಣ ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಮುಂದಿನ 20 ದಿನಗಳ ಕಾಲ ಈ ಯೋಗ ಶಿಬಿರ ನಡೆಯಲಿದ್ದು, ಮಕ್ಕಳು,ಮಹಿಳೆಯರು ಹಾಗೂ ಹಿರಿಯರು ಸೇರಿದಂತೆ 30 ಜನರು ಶಿಬಿರದಲ್ಲಿ ಯೋಗಾಭ್ಯಾಸಿಗಳಾಗಿ ಪಾಲ್ಗೊಂಡಿದ್ದರು