ವೇಣೂರು: 73 ಕುಟುಂಬಗಳಿಗೆ 94ಸಿ ಹಕ್ಕುಪತ್ರಗಳ ವಿತರಣೆ

ಬಾಕಿ ಉಳಿದಿರುವ 94ಸಿ ಹಕ್ಕುಪತ್ರ ವಿಲೇವಾರಿಗೆ ಶೀಘ್ರ ಕ್ರಮ: ಶಾಸಕ ಹರೀಶ್ ಪೂಂಜ

ವೇಣೂರು: ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಕಾರಣದಿಂದ ಬಾಕಿಯಾಗಿರುವ ಹಕ್ಕುಪತ್ರಗಳನ್ನು ಶೀಘ್ರ ವಿತರಣೆ ಮಾಡಲಾಗುವುದು. ಇತರ ಕಾರಣಗಳಿಂದ ಇನ್ನುಳಿದ ಹಕ್ಕುಪತ್ರಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತರಿಗೆ ಮನವಿ ಮಾಡಿ ತಿಳಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಫೆ.17ರಂದು ವೇಣೂರು ಗ್ರಾ.ಪಂ.ನಲ್ಲಿ ಕಂದಾಯ ಇಲಾಖೆ ವತಿಯಿಂದ 94ಸಿ ಯೋಜನೆಯಡಿ 73ಕುಟುಂಬಗಳಿಗೆ ಹಕ್ಕುಪತ್ರಗಳ ವಿತರಣೆಯನ್ನು ನೆರವೇರಿಸಿ ಅವರು ಮಾತನಾಡಿದರು. ವೇಣೂರು ಗ್ರಾ.ಪಂ. ಆಡಳಿತ ಮಂಡಳಿ ಕಳೆದ ಐದು ವರ್ಷದಲ್ಲಿ ಉತ್ತಮ ಆಡಳಿತ ನೀಡಿದೆ. ನನ್ನ ಮೂರು ವರ್ಷಗಳ ಶಾಸಕತ್ವದ ಅವಧಿಯಲ್ಲಿ ವೇಣೂರು ಗ್ರಾ.ಪಂ.ಗೆ ಗರಿಷ್ಠ ಅನುದಾನ ಒದಗಿಸಿದ್ದು, ಹಲವು ರಸ್ತೆಗಳಿಗೆ ಕಾಂಕ್ರಿಟ್ ಕಾಮಗಾರಿ ನಡೆಸಲಾಗಿದೆ ಎಂದರು.


ವೇಣೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಅರುಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಹಶೀಲ್ದಾರ್ ರಮೇಶ್ ಬಾಬು, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ಪಂ. ಕಾರ್ಯದರ್ಶಿ ವನಜ, ಗ್ರಾ.ಪಂ. ಸದಸ್ಯರಾದ ರಾಜೇಶ್ ಪೂಜಾರಿ ಮೂಡುಕೋಡಿ, ಲೋಕಯ್ಯ ಪೂಜಾರಿ, ಲಕ್ಷ್ಮಣ ಪೂಜಾರಿ, ಸತೀಶ್ ಹೆಗ್ಡೆ, ಯಶೋಧರ ಹೆಗ್ಡೆ, ನೇಮಯ್ಯ ಕುಲಾಲ್, ಹರೀಶ್ ಪಿ.ಎಸ್., ಅಣ್ಣು, ಲೀಲಾವತಿ, ಪುಷ್ಪಾ, ಶೋಭಾನಯನ, ಮೋಹಿನಿ ಶೆಟ್ಟಿ, ಗ್ರಾಮಲೆಕ್ಕಾಧಿಕಾರಿಗಳಾದ ಉಮೇಶ್, ಸುಧೀಶ್ ದೇವಯ್ಯ, ಗ್ರಾ.ಪಂ. ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಾದ ಅನೂಪ್ ಜೆ. ಪಾಯಸ್, ಜಕ್ರಿಯಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಪ್ರಾಸ್ತಾವಿಸಿ, ಸ್ವಾಗತಿಸಿದರು. ಪಂ. ಸಿಬ್ಬಂದಿ ನಾರ್ಣಪ್ಪ ಗೌಡ ಕಾರ್ಯಕ್ರಮ ನಿರೂಪಿಸಿ, ಪಂ. ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.